ರಾಯಚೂರು: ನವೋದಯ ನರ್ಸಿಂಗ್ ಕಾಲೇಜಿನ ಬಿ.ಎಸ್‌ಸಿ (ನರ್ಸಿಂಗ್) ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಡಾ. ದಾನನಗೌಡ ಅವರು ಲಕ್ಷ್ಮೀ ಪೂಜಾ ವಿಧಿಯನ್ನು ನೆರವೇರಿಸಿದರು. ಮುಖ್ಯ ಅತಿಥಿ ಪ್ರೊ. ಹೆಟ್ಸಿ ಸುತನಕುಮಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.
ಗಾಳಿಪಟ ಹಾರಿಸುವಂತಹ ಮನರಂಜನಾ ಚಟುವಟಿಕೆಗಳು ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿದವು. ಪ್ರೊ. ರಾಖೀ ಸರ್ಕಾರ್ ಹಾಗೂ ಪ್ರೊ. ತಬಿತಾ ಅವರು ರಂಗೋಲಿ ಸ್ಪರ್ಧೆಯನ್ನು ಮೌಲ್ಯಮಾಪನ ಮಾಡಿ ವಿಜೇತರಿಗೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು,
ಜ್ಯೋತಿಸ್ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಪುಣ್ಯ ಸ್ವಾಗತಿಸಿದರು. ಪಾರ್ವತಿ ವಂದಿಸಿದರು.
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಯಚೂರಲ್ಲಿ ಮಕ್ಕಳು ಗಾಳಿಪಟ ಖರೀದಿಸಿದರು

