ಮಸ್ಕಿ ಸಮೀಪ ಹಾಲಾಪೂರದಲ್ಲಿರುವ ಶ್ರೀ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಮೂರ್ತಿಗೆ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀ ಸಿದ್ದರಾಮೇಶ್ವರ ಇವರು ಕರ್ಮ ಯೋಗಿಯಾಗಿ ಶಿವಯೋಗಿಯಾಗಿ 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು, ಸಮಾಜದಲ್ಲಿ ಸಮಾನತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು ತಮ್ಮ ವಚನಗಳಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನ ಅಂಕಿತ ನಾಮದಿಂದ ಪ್ರಸಿದ್ಧಿ ಪಡೆದಿದ್ದರು ಇವರು ಸೂನ್ನಲಿಗೆಯನ್ನು ತಮ್ಮ ಕರ್ಮ ಕ್ಷೇತ್ರವನ್ನಾಗಿ ಮಾಡಿಕೊಂಡು ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನ ಕೊಟ್ಟಿರುವ ಶ್ರೇಷ್ಠ ಮಹಾನ್ ಪುರುಷರು ಆಗಿದ್ದರು ಇಂಥಹ ಮಹಾನ್ ಪುರುಷರ ಜಯಂತಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಕರಿಯಪ್ಪ ಬೊವಿ, ಆದಯ್ಯ ಸ್ವಾಮಿ, ರಂಗಪ್ಪ ಬೋವಿ, ಬಸೆಟ್ಟಪ್ಪ ಗುತ್ತೇದಾರ್, ಹನುಮಂತ ಬೋವಿ, ನಾಗರಾಜ್ ಫೋಟೋಗ್ರಾಫರ್, ಮಲ್ಲಪ್ಪ ಹಾಗೂ ಇನ್ನಿತರ ಇದ್ದರು

