ರಾಯಚೂರು ಜನವರಿ 13 (ಕರ್ನಾಟಕ ವಾರ್ತೆ): 2026ರ ಜನವರಿ 29, 30 ಮತ್ತು 31ರಂದು ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಕವಿಗೋಷ್ಠಿ ನಡೆಸಲು ರಾಯಚೂರು ಜಿಲ್ಲಾಡಳಿತವು ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿನ ಕವಿಗಳಿಂದ ಸ್ವರಚಿತ ಕವಿತೆಗಳನ್ನು ಆಹ್ವಾನಿಸಿದ್ದು, ಕವಿತೆಗಳನ್ನು ಕಳುಹಿಸಲು ಜನವರಿ 14 ಕೊನೆಯ ದಿನವಾಗಿದೆ.
ಕವಿತೆಯು ಸ್ವತಂತ್ರ ರಚನೆಯಾಗಿರಬೇಕು. ಕವಿತೆಯನ್ನು ಒಂದು ಪುಟ ಮೀರದಂತೆ ನುಡಿ ಅಥವಾ ಯುನಿಕೋಡ್‌ನಲ್ಲಿ ಟೈಪ್ ಮಾಡಿ ವರ್ಡ್ ಫಾರ್ಮೇಟನಲ್ಲಿ ಇ-ವಿಳಾಸ raichurdipr@gmail.com ಗೆ ಇ-ಮೇಲ್ ಮಾಡಬಹುದು. ಅಥವಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಕಾ ಭವನದ ಮೊದಲನೇ ಮಹಡಿ, ಶ್ರೀ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮAದಿರ ಹಿಂದುಗಡೆ, ರೈಲ್ವೆ ನಿಲ್ದಾಣದ ರಸ್ತೆ, ರಾಯಚೂರು ಜಿಲ್ಲೆ, ರಾಯಚೂರು ಇಲ್ಲಿಗೆ ಪೋಸ್ಟ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9916111356 ಅಥವಾ 9008462236 ಗೆ ವಾಟ್ಸಪ್ ಮಾಡಬಹುದಾಗಿದೆ.
ಕವಿತೆಯೊಂದಿಗೆ ಕಡ್ಡಾಯವಾಗಿ ತಮ್ಮ ಹೆಸರು, ಸ್ಥಳ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆಯ ವಿವರ, ವಿಳಾಸದ ದಾಖಲೆಗಾಗಿ ಆಧಾರ್ ಕಾರ್ಡ್ ಝರಾಕ್ಸ ಪ್ರತಿ ಮತ್ತು ವಯಸ್ಸಿನ ದಾಖಲೆಗಾಗಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಬೇರೆ ಯಾವುದೇ ದಾಖಲೆಗಳನ್ನು ಕಳುಹಿಸಬೇಕು. ಕವಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕೊನೆಯ ದಿನಾಂಕದ ನಂತರ ಬರುವ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ರಾಯಚೂರು ಜಿಲ್ಲಾ ಉತ್ಸವದ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಸಮಿತಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

You missed

ಸಿದ್ದರಾಮಯ್ಯ ಹಾಗೂ ಮಹದೇವಪ್ಪ ನಡುವಿನ ಭಿನ್ನಾಭಿಪ್ರಾಯದ ವಾದಗಳಿಗೆ ತೆರೆ ಎಳೆದ ಡಾ. ಯತೀಂದ್ರ ತಾಂಡವಪುರ ನವೆಂಬರ್ 7 ನಮ್ಮ ತಂದೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಮಾಜಿ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಸಣ್ಣಪುಟ್ಟ ವಿಚಾರಗಳನ್ನು ಹೊರತುಪಡಿಸಿದರೆ ಅವರ ಸ್ನೇಹ ಬಾಂಧವ್ಯ ಗಟ್ಟಿಯಾಗಿದೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ನಗರಭಿವೃದ್ಧಿ ಸಚಿವರಾದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ ರವರು ಸ್ಪಷ್ಟಪಡಿಸಿದರು ಅವರು ಎಂದು ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಾಗ ಮಾಧ್ಯಮದವರು ಈ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯ ಮಹಾದೇವಪ್ಪನವರ ನಡುವೆ ಯಾವುದೇ ವೈಮನಸಿಲ್ಲ ಅವರ ಸ್ನೇಹ ಗಟ್ಟಿ ಆಗಿದೆ ನಾನೇ ಹೋಗಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಇದೇ ನವಂಬರ್ 26ರಂದು ಸರ್ಕಾರದಿಂದ ನಡೆಯುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತಾವು ಭಾಗವಹಿಸಬೇಕು ಕಾರ್ಯಕ್ರಮಕ್ಕೆ ಸಹಕಾರಿ ನೀಡಬೇಕೆಂದು ಕೋರಿದೆ ಅವರು ಸಹ ಒಪ್ಪಿಕೊಂಡು ಬರುವುದಾಗಿ ಹೇಳಿದ್ದಾರೆ ಕೆಲವು ಸಂಘಟನೆಗಳು ಮಾಡಿದರೆ ಮೊದಲು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಹದೇವಪ್ಪನವರು ಹೇಳಿದ್ದಾರೆ ಅರಮನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅರಮನೆ ಕಟ್ಟಿದವರು ಮಹಾರಾಜರೇ ಇರಬಹುದು ಮಹಾರಾಜರು ಅರಮನೆ ಕಟ್ಟಲು ಸಾರ್ವಜನಿಕರ ತೆರಿಗೆ ಹಣದಿಂದ ಅರಮನೆಯನ್ನು ಕೊಟ್ಟಿದ್ದಾರೆ ಅದು ಸಾರ್ವಜನಿಕ ಸ್ವತ್ತು ಎಂದು ಹೇಳಿದ ಸಚಿವರು ಜಂಬೂಸವಾರಿ ಸಮಯದಲ್ಲಿ ಅಂಬಾರಿಯನ್ನು ನಾವು ಬಾಡಿಗೆ ರೂಪದಲ್ಲಿ ಅರಮನೆ ವತಿಯಿಂದ ಪಡೆದುಕೊಳ್ಳುತ್ತೇವೆ ಎಂದು ವಿವರವಾಗಿ ತಿಳಿಸಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕುತಂತ್ರ ನಡೆದಿತ್ತಲ್ಲ ಅದನ್ನು ಪತ್ತೆಹಚ್ಚಲು ಪೊಲೀಸರಿಗೆ ನಮ್ಮ ತಂದೆ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ ದೂರಿನ ಅನ್ವಯ ಈಗಾಗಲೇ ಪೊಲೀಸ್ರು ಎಲ್ಲಾ ರೀತಿಯ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಮತ್ತು ಭರವಸೆ ಇದೆ ಎಂದು ಹೇಳಿದ ಸಚಿವರು ಆದಷ್ಟು ಬೇಗನೆ ಈಸ್ಟಿಂಗ್ ಆಪರೇಷನ್ ಮೂಲ ರೂವಾರಿ ಯಾರು ಎಂಬುದನ್ನು ಪೊಲೀಸ್ ಅಧಿಕಾರಿಗಳು ಪತ್ತೆಚ್ಚಬೇಕು ಅವರನ್ನು ಪತ್ತೆ ಹಚ್ಚಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಸಚಿವರು ಹೇಳಿದರು