ಲಿಂಗಸಗೂರ : ಜ 14 .
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಕ್ಷಣವೇ ಹೃದಯ ರೋಗ ತಜ್ಞರು ಕಾರ್ಡಿಯಾಲಜಿಸ್ಟ್ ಹಾಗೂ ಕಿವಿ–ಮೂಗು–ಗಂಟಲು ( ಇಎನ್‌ಟಿ ) ತಜ್ಞರನ್ನು ನೇಮಕ ಮಾಡಬೇಕೆಂದು ಕರವೇ ಸ್ವಾಭಿಮಾನಿ ಸೇನೆ ತಾಲೂಕ ಅಧ್ಯಕ್ಷ ಜಿಲಾನಿ ಪಾಶ ಆರೋಗ್ಯ ಸಚಿವರಿಗೆ ತಾಲೂಕ ಆರೋಗ್ಯಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು
ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಗೆ ಪ್ರತಿದಿನ ನೂರಾರು ಬಡ ಹಾಗೂ ಮಧ್ಯಮ ವರ್ಗದ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ರೋಗಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಣಿತ ವೈದ್ಯರ ಅಗತ್ಯತೆ ತೀವ್ರವಾಗಿದೆ ಎಂದು ಸಂಘಟನೆ ತಿಳಿಸಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ ಕೊರತೆ ಇರುವುದರಿಂದ ಹೃದಯ ಸಮಸ್ಯೆಗಳಿಂದ ಬಳಲುವ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಹೋಗಬೇಕಾಗಿದ್ದು, ಇದರಿಂದ ಅಪಾರ ಆರ್ಥಿಕ ಹೊರೆ ಎದುರಿಸು ವಂತಾಗಿದೆ. ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಸಿಗದೆ ಜೀವಾಪಾಯ ಸಂಭವಿಸುವ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ ,
ಕಿವಿ–ಮೂಗು–ಗಂಟಲು.( ಇಎನ್‌ಟಿ ) ತಜ್ಞರ ಕೊರತೆಯಿಂದ ಸಂಬಂಧಿತ ರೋಗಗಳಿಂದ ಬಳಲುವ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬಡ ಹಾಗೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಶ್ವತವಾಗಿ ಹೃದಯ ರೋಗ ತಜ್ಞರು ಹಾಗೂ ಇಎನ್‌ಟಿ ತಜ್ಞರನ್ನು ನೇಮಕ ಮಾಡುವುದು ಅತ್ಯಂತ ಅಗತ್ಯವಾಗಿದೆ.
ಸಾರ್ವಜನಿಕ ಆಸ್ಪತ್ರೆಗೆ “ಇಕೋ” ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಕೂಡ ತಕ್ಷಣ ಒದಗಿಸಬೇಕೆಂದು ಒತ್ತಾಯಿಸಿದರು .
ಈ ಸಂದರ್ಭದಲ್ಲಿ ರವಿಕುಮಾರ ಬರಗುಡಿ, ಅಜೀಜ ಪಾಷ, ಮೋಸೀನ ಖಾನ, ಅಲ್ಲಾದ್ದೀನ ಬಾಬಾ, ತಿಮ್ಮನಗೌಡ, ಬಸನಗೌಡ, ಮಲ್ಲಣ್ಣ, ಮಾರೆಪ್ಪ, ರಹೀಮ್ ಹರೀಫ್, ಪ್ರಭುಗೌಡ, ರಾಜು ನಾಗರಾಜ, ಖಾಸೀಂಸಾಬ, ನಬೀಸಾಬ ಹಾಗೂ ವೀರೇಶ ಹೀರೆಮಠ ಸೇರಿದಂತೆ ಹಲವರು ಇದ್ದರು .

