ಮಸ್ಕಿ: ಡಾ. ಶಿವಶರಣಪ್ಪ ಇತ್ಲಿ ಅವರು ಶೈಕ್ಷಣಿಕ, ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದ್ದು, ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿವೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಶಿವಶರಣಪ್ಪ ಇತ್ಲಿ ಅವರ ನಮ್ಮ ಡಾಕ್ಟರ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಇತ್ಲಿ ಅವರು ತಮ್ಮ ಬದುಕಿನುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಿದವರು. ಸರಳತೆ, ಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗಳಿಂದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಅವರ ವ್ಯಕ್ತಿತ್ವ ಮತ್ತು ಸಾಧನೆಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದರು.

ಡಾ. ಕೆ. ಶಿವರಾಜ ಅವರು ಡಾ. ಇತ್ಲಿ ಅವರೊಂದಿಗಿನ ಒಡನಾಟ ಹಾಗೂ ಅವರ ಸಾಧನೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನ ಬದುಕಿನ ಸಾರ್ಥಕತೆ ಸಮಾಜಕ್ಕೆ ಸಲ್ಲಿಸಿದ ಸೇವೆಯಲ್ಲಿ ಅಡಗಿದೆ. ಡಾ. ಇತ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ, ವಕೀಲ ಮಸ್ಕಿ ನಾಗರಾಜ, ಡಾ. ಬಿ.ಎಚ್. ದಿವಟರ್, ಡಾ. ವಿಜಯಕುಮಾರ ಹಾಗೂ ಸಹಕಾರ ಭಾರತಿ ಸಂಯೋಜಕ ರಮೇಶ ವೈದ್ಯ ಮಾತನಾಡಿ, ಡಾ. ಇತ್ಲಿ ಅವರ ವ್ಯಕ್ತಿತ್ವ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಭ್ರಮರಾಂಬ ಸಹಕಾರ ಸಂಘದ ಅಧ್ಯಕ್ಷ ಪಂಪಣ್ಣ ಗುಂಡಳ್ಳಿ, ಉಪಾಧ್ಯಕ್ಷ ಚಿದಾನಂದ ಎಚ್., ಇತ್ಲಿ ಕುಟುಂಬದ ಡಾ. ಮಲ್ಲಿಕಾರ್ಜುನ ಇತ್ಲಿ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಹಿರೇಮಠ ಸೇರಿದಂತೆ ಕುಟುಂಬದ ಸದಸ್ಯರು, ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಮಹಾಂತೇಶ ಮಸ್ಮಿ, ವೀರೇಶ ಸೌದ್ರಿ ನಿರೂಪಿಸಿದರು.

Leave a Reply

Your email address will not be published. Required fields are marked *

You missed

ಸಿದ್ದರಾಮಯ್ಯ ಹಾಗೂ ಮಹದೇವಪ್ಪ ನಡುವಿನ ಭಿನ್ನಾಭಿಪ್ರಾಯದ ವಾದಗಳಿಗೆ ತೆರೆ ಎಳೆದ ಡಾ. ಯತೀಂದ್ರ ತಾಂಡವಪುರ ನವೆಂಬರ್ 7 ನಮ್ಮ ತಂದೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಮಾಜಿ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಸಣ್ಣಪುಟ್ಟ ವಿಚಾರಗಳನ್ನು ಹೊರತುಪಡಿಸಿದರೆ ಅವರ ಸ್ನೇಹ ಬಾಂಧವ್ಯ ಗಟ್ಟಿಯಾಗಿದೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ನಗರಭಿವೃದ್ಧಿ ಸಚಿವರಾದ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ ರವರು ಸ್ಪಷ್ಟಪಡಿಸಿದರು ಅವರು ಎಂದು ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಾಗ ಮಾಧ್ಯಮದವರು ಈ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯ ಮಹಾದೇವಪ್ಪನವರ ನಡುವೆ ಯಾವುದೇ ವೈಮನಸಿಲ್ಲ ಅವರ ಸ್ನೇಹ ಗಟ್ಟಿ ಆಗಿದೆ ನಾನೇ ಹೋಗಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಇದೇ ನವಂಬರ್ 26ರಂದು ಸರ್ಕಾರದಿಂದ ನಡೆಯುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತಾವು ಭಾಗವಹಿಸಬೇಕು ಕಾರ್ಯಕ್ರಮಕ್ಕೆ ಸಹಕಾರಿ ನೀಡಬೇಕೆಂದು ಕೋರಿದೆ ಅವರು ಸಹ ಒಪ್ಪಿಕೊಂಡು ಬರುವುದಾಗಿ ಹೇಳಿದ್ದಾರೆ ಕೆಲವು ಸಂಘಟನೆಗಳು ಮಾಡಿದರೆ ಮೊದಲು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಹದೇವಪ್ಪನವರು ಹೇಳಿದ್ದಾರೆ ಅರಮನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅರಮನೆ ಕಟ್ಟಿದವರು ಮಹಾರಾಜರೇ ಇರಬಹುದು ಮಹಾರಾಜರು ಅರಮನೆ ಕಟ್ಟಲು ಸಾರ್ವಜನಿಕರ ತೆರಿಗೆ ಹಣದಿಂದ ಅರಮನೆಯನ್ನು ಕೊಟ್ಟಿದ್ದಾರೆ ಅದು ಸಾರ್ವಜನಿಕ ಸ್ವತ್ತು ಎಂದು ಹೇಳಿದ ಸಚಿವರು ಜಂಬೂಸವಾರಿ ಸಮಯದಲ್ಲಿ ಅಂಬಾರಿಯನ್ನು ನಾವು ಬಾಡಿಗೆ ರೂಪದಲ್ಲಿ ಅರಮನೆ ವತಿಯಿಂದ ಪಡೆದುಕೊಳ್ಳುತ್ತೇವೆ ಎಂದು ವಿವರವಾಗಿ ತಿಳಿಸಿದ ಸಚಿವರು ನಮ್ಮ ತಂದೆ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕುತಂತ್ರ ನಡೆದಿತ್ತಲ್ಲ ಅದನ್ನು ಪತ್ತೆಹಚ್ಚಲು ಪೊಲೀಸರಿಗೆ ನಮ್ಮ ತಂದೆ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ ದೂರಿನ ಅನ್ವಯ ಈಗಾಗಲೇ ಪೊಲೀಸ್ರು ಎಲ್ಲಾ ರೀತಿಯ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಮತ್ತು ಭರವಸೆ ಇದೆ ಎಂದು ಹೇಳಿದ ಸಚಿವರು ಆದಷ್ಟು ಬೇಗನೆ ಈಸ್ಟಿಂಗ್ ಆಪರೇಷನ್ ಮೂಲ ರೂವಾರಿ ಯಾರು ಎಂಬುದನ್ನು ಪೊಲೀಸ್ ಅಧಿಕಾರಿಗಳು ಪತ್ತೆಚ್ಚಬೇಕು ಅವರನ್ನು ಪತ್ತೆ ಹಚ್ಚಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಸಚಿವರು ಹೇಳಿದರು