ತಾಳಿಕೋಟಿ: ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ(ರಿ) ಇದರ ತಾಲೂಕಾ ಶಾಖೆಯ ವತಿಯಿಂದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ರವಿವಾರ ಪಟ್ಟಣದ ಪುರಸಭೆ ಹಳೆ ಕಾರ್ಯಾಲಯ ಆವರಣದಲ್ಲಿ ಹಮ್ಮಿಕೊಂಡ ದಿನಾಚರಣೆಯ ಕಾರ್ಯಕ್ರಮವನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೆಹಬೂಬ ಕುಳಗೇರಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಪಟ್ಟಣದಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗಿದೆ ಇಲ್ಲಿಯ ಶಾಖೆಯ ಪದಾಧಿಕಾರಿಗಳು ಕ್ರಿಯಾಶೀಲತೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಅವರನ್ನು ಅಭಿನಂದಿಸುತ್ತೇನೆ. ಸರ್ಕಾರ ನಮಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸದುಪಯೋಗ ಮಾಡಿಕೊಳ್ಳಬೇಕು ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು. ತಾಲೂಕ ಶಾಖೆಯ ಅಧ್ಯಕ್ಷ ಜುಮ್ಮಣ್ಣ ನಾಲತವಾಡ ಅವರು ಮಾತನಾಡಿ ಬೀದಿ ಬದಿ ವ್ಯಾಪಾರಿಗಳ ಹಲವಾರು ಸಮಸ್ಯೆಗಳಿವೆ ಇವುಗಳ ಪರಿಹಾರಕ್ಕೆ ಕ್ಷೇತ್ರದ ಶಾಸಕರು ನಮ್ಮೊಂದಿಗೆ ಸಹಕರಿಸಬೇಕು. ನಾವೆಲ್ಲರೂ ಸಂಘಟನೆಯ ಬಲವರ್ಧನೆಗೆ ಹೆಚ್ಚು ಆಸಕ್ತಿ ವಹಿಸಬೇಕಾಗಿದೆ, ಸವಲತ್ತುಗಳನ್ನು ಪಡೆಯಲು ಸಂಘಟನೆ ಅಗತ್ಯವಾಗಿದೆ ಎಂದರು. ಒಕ್ಕೂಟದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಡೇಸಾಬ ಅ.ಚೌಧರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕ ಉಪಾಧ್ಯಕ್ಷ ಅಬ್ದುಲ್ ಲತೀಫ ಬೀಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ನಜೀರ ಅಹ್ಮದ್ ಚೋರಗಸ್ತಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಆಸೀಫ ಕೆಂಭಾವಿ, ದಲಿತ ಸೇನೆ ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ, ಪದಾಧಿಕಾರಿಗಳಾದ ನಬಿಸಾಬ ಜಾಲಿಬೆಂಚಿ, ಮಹಮ್ಮದ್ ರಫೀಕ ಚೌದ್ರಿ,ಬಿ.ಎ.ಚೌಧರಿ,ಅಕ್ಬರಸಾಬ ಕೂಡಗಿ, ನಾನೇಶ್ವರ ಹಿಂಗ ಮೋರೆ, ಸಂತೋಷ್ ಇಲ್ಕಲ್,ಸೂಶಿಲಾಬಾಯಿ ಭಜಂತ್ರಿ,ಅಂಬೂಬಾಯಿ ಭಂಡಾರಿ, ದುರ್ಗಾಬಾಯಿ ಹಿಂಗಮೋರೆ,ಗಂಗೂಬಾಯಿ ಹಿಂಗಮೋರೆ, ಚನ್ನೂಬಾಯಿ ಬಿಜಾಪುರ,ಮಾನಪ್ಪ ಕಟ್ಟಿಮನಿ, ಹುಸೇನ ಚಾಂದಕೋಟೆ, ಹಸನಸಾಬ ಚೌದ್ರಿ, ಮಕ್ತೂಮಸಾಬ ಬಳಗಾನೂರ,ಮಲಕಾಜಿ ನೆಲ್ಲಗಿ, ಹುಸೇನಸಾಬ ನಾಲತವಾಡ,ಖಾಜಾಅಮೀನ ಹಳ್ಳೂರ,ದಾವಲಸಾಬ ಬಳಗಾನೂರ,ಬುರಾನಸಾಬ ಜಮಾದಾರ ಮತ್ತಿತರರು ಇದ್ದರು.

