ತಾಳಿಕೋಟೆ : ತಾಲ್ಲೂಕಿನ ಹಿರೂರು ಗ್ರಾಮದಲ್ಲಿರುವ ಅನ್ನದಾನೇಶ್ವರ ಸಂಸ್ಥಾನ ಹಿರೇಮಠವು ಜಾಗತಿಕ ಇತಿಹಾಸದಲ್ಲಿ ತನ್ನ ಅಚ್ಚನ್ನು ಮೂಡಿಸಿದೆ ಕ್ರಿಸ್ತಶಕ 6ನೇ ಶತಮಾನದಲ್ಲಿ ಹಿರೂರ ಗ್ರಾಮವನ್ನು ಕಟ್ಟಿ 330 ವರ್ಷ ಬಾಳಿದ ಕರ್ತೃ ಪುರುಷ ಅನ್ನ ದಾನೇಶ್ವರ ಪ್ರಸಿದ್ಧ ಪವಾಡ ಪುರುಷರು. ಈ ಮಠಕ್ಕೆ ಇಲ್ಲಿಯವರೆಗೆ 36 ಜನ ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಈಗಿನ 35ನೇ ಪೀಠಾಧಿಪತಿಗಳಾದ ಶತಾಯುಷಿ ಶತಮಾನದ ಸಂತ ಗುರು ಶಾಂತವೀರ ಶಿವಯೋಗಿ ಶಿವಾಚಾರ್ಯರು 1925 ರಲ್ಲಿ ಜನಿಸಿ ಬಾಲ್ಯವನ್ನು ಹುನಗುಂದ್ ತಾಲೂಕಿನ ವೀರಾಪುರದಲ್ಲಿ ಕಳೆದು ಕೆಲಕಾಲ ಶಿವಯೋಗ ಮಂದಿರ ಮತ್ತು ಇನ್ನುಳಿದ ಧಾರ್ಮಿಕ ಕೇಂದ್ರಗಳಲ್ಲಿ ಅಧ್ಯಯನ ಮಾಡಿ 1945ರಲ್ಲಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾಗಿ 1948ರಲ್ಲಿ ಹಿರೂರು ಮಠದ 35ನೇ ಪೀಠಾಧ್ಯಕ್ಷರಾಗಿ ಸಮಾಜ ಧಾರ್ಮಿಕ ಸೇವೆಯಲ್ಲಿ ತಮ್ಮಣ್ಣ ತೊಡಗಿಸಿಕೊಂಡರು. ಬಡವರ ದೀನದಲಿತ ಭಕ್ತರ ಬಾಳಿಗೆ ಆಶಾಕಿರಣವಾಗಿ ನಂದಾದೀಪವಾಗಿದ್ದರು ಅಖಂಡ 75 ವರ್ಷಗಳ ಕಾಲ ಶ್ರೀಮಠದ ಭಕ್ತರ ಸರ್ವ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಲಿಂಗೈಕ್ಯರಾದ ಶ್ರೀಗಳ ಅಂತಿಮ ಕಾರ್ಯ ಜ.೧೬ ರಂದು ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಮಠದ ಆವರಣದಲ್ಲಿ ನೆರವೇರುವುದು. ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *