ಮಾನ್ವಿ : ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ಚಿಕಲಪರ್ವಿಯ ತುಂಗಭದ್ರ ನದಿತೀರದಲ್ಲಿ ಸಾವಿರಾರು ಭಕ್ತರು ಮತ್ತು ಕುಟುಂಬಗಳು ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮುಂಜಾನೆಯಿಂದಲೇ ನದಿಯಲ್ಲಿ ಪವಿತ್ರ ಸ್ನಾನ, ಪೂಜೆ–ಪುನಸ್ಕಾರಗಳು ನಡೆಯುತ್ತಿದ್ದು, ಹಬ್ಬದ ವಾತಾವರಣ ಕಂಡುಬಂದಿತು.
ನದಿತೀರದ ಮರಳು ಪ್ರದೇಶಗಳಲ್ಲಿ ಕುಟುಂಬಗಳು ಪಂಗಡವಾಗಿ ಕುಳಿತು ಊಟೋಪಚಾರ ನಡೆಸಿದರೆ, ಮಹಿಳೆಯರು ಹಾಗೂ ಮಕ್ಕಳು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೆಲವರು ತಾತ್ಕಾಲಿಕ ಗುಡಾರಗಳನ್ನು ಹಾಕಿಕೊಂಡು ದಿನವಿಡೀ ವಿಶ್ರಾಂತಿ ಹಾಗೂ ಸಂಭ್ರಮದಲ್ಲಿ ತೊಡಗಿದರು.
ನದಿಯಲ್ಲಿ ಸ್ನಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ತೀರದಲ್ಲಿ ಚಟುವಟಿಕೆಗಳು ಗಟ್ಟಿಯಾಗಿ ಕಂಡುಬಂದವು.
ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

