ಮೈಲಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈಲಾಪುರ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಕುಂಭ ಕಳಸದೊಂದಿಗೆ ಆಚರಿಸಲಾಯಿತು ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಅಮರಯ್ಯ ಸ್ವಾಮಿ ಹಾಗೂ ಚಂದ್ರಶೇಖರ ಸ್ವಾಮಿ ವಹಿಸಿದ್ದರು ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ತಂದೆ ರಾಮಯ್ಯ ಉದ್ಘಾಟಕರಾಗಿ ಶ್ರೀ ವೀರೇಶ್ ತಳವಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಮೈಲಾಪುರ್ ನೆರವೇರಿಸಿದರು. ಊರಿನ ಗಣ್ಯ ಮಾನ್ಯರು ಸಂಘದ ಅಧ್ಯಕ್ಷರು ನಿರ್ದೇಶಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು
ಈ ದಿನ ಕಾರ್ಯಕ್ರಮದಲ್ಲಿ ದಾನಿಗಳಿಂದ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು ತಂದೆ ತಾಯಿ ಇಲ್ಲದ, ಮನೆ ಆಸ್ತಿ ಇಲ್ಲದ ಬಡ ಮಕ್ಕಳಿಗೆ ಒಂದು ವರ್ಷಕ್ಕೆ ಬೇಕಾಗುವಷ್ಟು ಕಲಿಕಾ ಸಾಮಗ್ರಿಗಳನ್ನು ಕೊಡುವುದರ ಮೂಲಕ ದಾನಿಗಳು ಆ ಮಕ್ಕಳನ್ನು ದತ್ತು ಪಡೆದರು ದಾನಿಗಳ ಸಹಾಯ ಸಹಕಾರದೊಂದಿಗೆ ಪ್ರೋತ್ಸಾಹಿಸಿ ಈ ಸಾರಿ 111 ಮಕ್ಕಳನ್ನು ದತ್ತು ಪಡೆದು ಮಾನವಿಯತೆನ್ನು ಮೆರೆದ ಮನುಕುಲದ ಮಹಾ ಪುಣ್ಯವಂತರು ಎಂದರೆ ತಪ್ಪಾಗಲಾರದು ಹಾಗೆ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ದತ್ತು ಪಡೆದ ದಾನಿಗಳು
ಸರ್ಕಾರಿ ಪ್ರೌಢಶಾಲೆ ಕಾರಟಗಿಯ 1990-1991ನೆಯ ಸಾಲಿನ ಹಳೆಯ ವಿದ್ಯಾರ್ಥಿಗಳ ಸಹಪಾಠಿಗಳ ಸ್ನೇಹ ಸಂಗಮ 91 ಗ್ರೂಪ್ ವತಿಯಿಂದ 42 ಮಕ್ಕಳು
ಹಾಗೂ ಆಂಜನೇಯ ಮೂಲಿ ಮನೆ ಅವರ ಸ್ನೇಹಿತರಾದ ಶ್ರೀ ದೇವೇಂದ್ರಪ್ಪ ದೊಡ್ಡೋಡಿಗೆ ಎರಡು ಮಕ್ಕಳು
ಡಾಕ್ಟರ್ ಭವಾನಿ ಪ್ರಸಾದ್ 2 ಮಕ್ಕಳು ಅಂಬಣ್ಣ ಸಾಲೋಣಿ ಎರಡು ಮಕ್ಕಳು
ಪರಶುರಾಮ್ ಬಣ್ಣದ ಕೆ ಎಸ್ ಆರ್ ಟಿ ಸಿ ಕಾರಟಗಿ ಎರಡು ಮಕ್ಕಳು ಇನ್ನುಳಿದ ಆತ್ಮೀಯರಾದ ಶ್ರೀ ನಿಂಗನಗೌಡ ನಾಡಗೌಡ್ರು 10 ಮಕ್ಕಳು ಶ್ರೀಮತಿ ಐಶ್ವರ್ಯ ಗಂಡ ದೊಡ್ಡ ಬಸವ 10 ಮಕ್ಕಳು ರಾಮಣ್ಣ ಕಾಮನೂರ್ ಐದು ಮಕ್ಕಳು ಮೈಲಾರಪ್ಪ ಸಮುದ್ರಿ ಐದು ಮಕ್ಕಳು ಶ್ರೀ ಉಮೇಶ್ ಉಪನ್ಯಾಸಕರು ಐದು ಮಕ್ಕಳು ಶ್ರೀ ಚನ್ನಬಸಪ್ಪ ಕುಷ್ಟಗಿ ಐದು ಮಕ್ಕಳು
ಎಲ್ ಐ ಸಿ ಫ್ಯಾಕ್ಟ್ರಿ ಕಾರ್ಟಿಗಿ ಐದು ಮಕ್ಕಳು ಶ್ರೀಮತಿ ಶೋಭಾ ಹಿರೇಮಠ್ ಬೆಂಗಳೂರು ಐದು ಮಕ್ಕಳು ಶ್ರೀ ಶಿವಶರಣಯ್ಯ ಸ್ವಾಮಿ ಬೇವಿನಾಳ ನಾಲ್ಕು ಮಕ್ಕಳು ಶ್ರೀ ವೀರೇಶ್ ಗಾದಿಗನೂರ್ ಮೈಲಾಪುರ್ ಐದು ಮಕ್ಕಳು ಶ್ರೀಮತಿ ವಿಜಯಲಕ್ಷ್ಮಿ ಹಾದಿಮನಿ ಎರಡು ಮಕ್ಕಳು ಇಷ್ಟೆಲ್ಲಾ ದಾನಿಗಳು ಸರ್ಕಾರಿ ಶಾಲೆಯ ತಂದೆ ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಮನೆ ಆಸ್ತಿ ಇಲ್ಲದ ಬಡ ಮಕ್ಕಳನ್ನು ದತ್ತು ಪಡೆದು ಕಲಿಕಾ ಸಾಮಗ್ರಿಗಳನ್ನು ನೀಡಿ ಪವಿತ್ರವಾದ ಪುಣ್ಯದ ಕೆಲಸವನ್ನು ಮಾಡಿದ್ದಾರೆ ಈ ಕೆಲಸದಿಂದ ಮೈಲಾಪುರದ ಜನತೆ ಶಿಕ್ಷಕರು ಪಾಲಕರು ಪೋಷಕರು ಮುದ್ದು ಮಕ್ಕಳು ಸಂತೋಷವನ್ನು ಹಂಚಿಕೊಂಡಿದ್ದಾರೆ ಹೀಗಾಗಿ ತಮಗೆ ಎಲ್ಲರ ಪರವಾಗಿ ಪ್ರೀತಿ ಹಾಗೂ ಗೌರವ ಪೂರ್ವಕವಾಗಿ ಅಭಿನಂದಿಸುತ್ತೇವೆ. ಮುಖ್ಯೋಪಾಧ್ಯಯರಾದ ತೋಟಯ್ಯ ಅಂಗಡಿ ಎಲ್ಲಾ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದಾನಿಗಳನ್ನು ಶಾಲಾವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಆಂಜನೇಯ ಮೂಲಿ ಮನೆ. ಶ್ರೀ ಅಂಬಣ್ಣ ಸಾಲೋಣಿ.ಶ್ರೀ ನಿಂಗನಗೌಡ್ರು ನಾಡಗೌಡ್ರು .ಶ್ರೀನಿವಾಸ್ ಬುರುಗಪಲ್ಲಿ ಚಳ್ಳೂರ್ ಕ್ಯಾಂಪ್ .ಎಸ್ಎಂ ತಿಪ್ಪೇಸ್ವಾಮಿ ಕಾರ್ಟಗಿ .ಶ್ರೀ ಶರಣಬಸವ ಗುಂಜಳ್ಳಿ ಬೇವಿನಾಳ. ಎಲ್ಲಾ ದಾನಿಗಳಿಗೆ ಆ ಭಗವಂತ ಆಯುಷ್ಯ ಆರೋಗ್ಯ ಸರಿ ಸಂಪತ್ತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.


