ಮಾನ್ವಿ: ಪಟ್ಟಣದ ನೇತಾಜಿ ಸುಭಾಶಚ್ಚಂದ್ರ ಬೋಸ್ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ನೇತಾಜಿ ಪ್ರಾಥಮಿಕ ,ಫ್ರೌಡಶಾಲೆ, ಮತ್ತು ಪದವಿಪೂರ್ವ ಕಾಲೇಜ್ ವತಿಯಿಂದ ನಡೆದ ನೇತಾಜಿ ವಿಜ್ಞಾನ ವೈಭವ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ನೂತನ ನೇತಾಜಿ ವಿಜ್ಞಾನ ಪದವಿ ಪೂರ್ವ ಕಾಲೇಜ್ ಅನ್ನು ರಾಜ್ಯ ವಿಜ್ಞಾನ,ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಭೊಸರಾಜು ಉದ್ಘಾಟಿಸಿ ಮಾತನಾಡಿ ಶಿಕ್ಷಣವನ್ನು ವ್ಯಾಪಾರಿ ದೃಷ್ಟಿಯಲ್ಲಿ ನೋಡದೆ ಸೇವಾದೃಷ್ಠಿಯಲ್ಲಿ ನೋಡುವ ಮೂಲಕ ಇಂದು 1180 ವಿದ್ಯಾರ್ಥಿಗಳಿಗೆ ನೇತಾಜಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜ್ಞಾನ ವಿಭಾಗವನ್ನು ಸಂಸ್ಥೆಯು ಪ್ರಾರಂಭಿಸಿದೆ. ನಂಜುಡಪ್ಪ ಅಯೋಗದ ವರದಿಯಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮಾನ್ವಿ ತಾಲೂಕು ಅತ್ಯಂತ ಹಿಂದುಳಿದಿರುವ ತಾಲೂಕಾಗಿದ್ದು. ಶೈಕ್ಷಣಿಕವಾಗಿ ಆರ್ಥಿಕವಾಗಿ,ಸಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಈ ಭಾಗದ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳು ತಮ್ಮ ವಾರ್ಷಿಕ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದಾರೆ ಪ್ರತಿ ವರ್ಷ ಶಿಕ್ಷಣ ಕ್ಷೇತ್ರಕ್ಕಾಗಿ ಸರಕಾರ ಈ ಭಾಗಕ್ಕೆ 1250 ಕೋಟಿ ಅನುದಾನ ನೀಡುತ್ತಿದೆ.ಅದ್ದರು ಕೂಡ ಎಸ್.ಎಸ್.ಎಲ್.ಸಿ, ಮತ್ತು ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ 33 ನೇ ಸ್ಥಾನದಲ್ಲಿರುತ್ತದೆ. ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಈ ಬಾರಿಯ ಫಲಿತಾಂಶವನ್ನು ಹೆಚ್ಚಿಸುವುದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಸರ್ಕಾರಿ ಶಾಲೆಗಳ ಅಭಿವೃದ್ದಿಯ ಜೋತೆಗೆ ಈ ಭಾಗದಲ್ಲಿ ಕಳೆದ 25 ವರ್ಷಗಳಿಂದ 1995 ರಲ್ಲಿ ಪ್ರಾರಂಭಿಸಲಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಖಾಸಗಿ ಶಾಲೆಗಳನ್ನು ಗುರುತಿಸಿ ಅನುದಾನವನ್ನು ನೀಡುವುದಕ್ಕೆ ಕೂಡ ಚಿಂತನೆ ನಡೆಸುತ್ತಿದೆ. ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಬಹಳಷ್ಟು ಮುಂದುವರೆದಿದ್ದು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಅಭಿವೃದ್ದಿ ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ವಿಷಯದಲ್ಲಿ ಪರಿಣಿತಿ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಬೆಂಗಳೂರಿನ ಹೆಬ್ಬಳ ಹತ್ತಿರ ವಿಜ್ಞಾನ ಆಕಡೆಮಿಯನ್ನು ಸ್ಥಾಪನೆ ಮಾಡಲಾಗಿದೆ,ಏಷ್ಯದಲ್ಲಿ ನಂ.1 ಹೆಸರುಗಳಿಸಿದ ವಿಜ್ಞಾನ ಕೇಂದ್ರಗಳನ್ನು ಮಂಗಳೂರಿನ ಪಿಲಿಕುಳದಲ್ಲಿ,ವಿಜಯನಗರದಲ್ಲಿ 50ಕೋಟಿ ವೆಚ್ಚದಲ್ಲಿ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ರಾಯಚೂರಿನ ವಿಜ್ಞಾನ ಕೇಂದ್ರವನ್ನು ಮೇಲ್ದಾರ್ಜೆಗೇರಿಸುವುದಕ್ಕೆ 20ಕೋಟಿ, ತಾರಲಾಯ ನಿರ್ಮಾಣಕ್ಕೆ 10 ಕೋಟಿ ನೀಡಲಾಗಿದೆ. ಕೋಲಾರ,ರಾಮನಗರ,ರಾಯಚೂರು ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಅಗತ್ಯವಿರು ಜಮೀನು ಗುರುತಿಸಲಾಗಿದೆ. ರಾಜ್ಯದ 830 ಸರ್ಕಾರಿ ಶಾಲೆಗಳಿಗೆ ಟೆಲಿಸ್ಕೋಪ್‌ಗಳನ್ನು ನೀಡಲಾಗಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿನ ಶಾಲಾ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಸಂಚಾರಿ ವಿಜ್ಞಾನ ವಸ್ತು ಪ್ರದರ್ಶನ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಂದು ತಿಳಿಸಿದರು.
ಶಾಸಕ ಹಂಪಯ್ಯನಾಯಕ ಮಾತನಾಡಿದರು.
.ಕಾಲೇಜಿನ 11 ಕೋಠಡಿಗಳಲ್ಲಿ ವಿಜ್ಞಾನ,ಇತಿಹಾಸ, ಗಣಿತ,ವಾಣಿಜ್ಯ, ಕಲಾ, ಕೃಷಿ, ಸಾಹಿತ್ಯ, ಸಂಸ್ಕೃತಿ, ಭಾಷೆ,ಖಗೋಳಶಾಸ್ತç, ಭೂಮಿ ಸಂರಕ್ಷಣೆ, ಆಯುರ್ವೇದ, ಅಬಾಕಾಸ್, ಮುಂತಾದ ವಿಷಯಗಳಿಗೆ ಸಂಬAಧಿಸಿದ 270 ಕ್ಕೂ ಹೆಚ್ಚು ಮಾದರಿಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ.ನರಸಿಂಹ,ಕಾರ್ಯದರ್ಶಿ ವಿಜಯಲಕ್ಷಿö್ಮÃ, ರಾಜ್ಯ ಕುರುಬರ ಸಂಘದ ಅಧ್ಯಕ್ಷರಾದ ಎಂ.ಈರಣ್ಣ, ನ.ಯೋ.ಪ್ರಾ.ಅಧ್ಯಕ್ಷ ಅಬ್ದುಲ್ ಗಫೂರಸಾಬ್, ಬಿ.ಕೆ.ಅಮರೇಶಪ್ಪ, ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಸೋಮಶೇಖರ್ ಹೊಕ್ರಾಣಿ, ತಾ. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಮನಿ, ಸ.ನೌ.ಸಂಘದ ತಾ.ಅಧ್ಯಕ್ಷರಾದ ಸುರೇಶ ಕುರ್ಡಿ, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಕ.ರಾ.ಪ್ರಾ.ಶಾ.ಶಿ.ಸಂಘದ ತಾ.ಅಧ್ಯಕ್ಷರಾದ ಸಂಗಮೇಶ ಮುಧೋಳ್, ಖಾ.ಶಿ.ಸಂ.ಒಕ್ಕೂಟದ ಅಧ್ಯಕ್ಷ ರಾಜಾ ಸುಭಾಶ್ಚಂದ್ರನಾಯಕ, ತಾ.ಪದವಿ ಪೂರ್ವ ಕಾಲೇಜು ಒಕ್ಕೂಟದ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ, ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಜಿ.ನಾಗರಾಜ್ ,ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಶಾಂತಪ್ಪ, ಶರಣಯ್ಯನಾಯಕ ಗುಡದಿನ್ನಿ,ಬಾಲಸ್ವಾಮಿ ಕೊಡ್ಲಿ,ಶಿವಮೂರ್ತಿ, ತಾ.ಪ.ಉ.ಸಂಘದ ಅಧ್ಯಕ್ಷರಾದ ಆಂಜನೇಯ್ಯ, ಮುಖ್ಯಗುರು ಆನಿಸ್ ಫಾತೀಮ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಮಾನ್ವಿ: ಪಟ್ಟಣದ ನೇತಾಜಿ ಸುಭಾಶಚ್ಚಂದ್ರ ಬೋಸ್ ಶಿಕ್ಷಣ ಸಂಸ್ಥೆಯ ಅವರಣದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಸಚಿವರಾದ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
ಮಾನ್ವಿ: ಮಾನ್ವಿ: ಪಟ್ಟಣದ ನೇತಾಜಿ ಸುಭಾಶಚ್ಚಂದ್ರ ಬೋಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನ ವಿಜ್ಞಾನ ಕಾಲೇಜನ್ನು ಸಚಿವರಾದ ಎನ್.ಎಸ್.ಬೋಸರಾಜು ಉದ್ಘಾಟಿಸಿದರು.


