ಮಾನ್ವಿ: ಪಟ್ಟಣದ ಶ್ರೀ ನಗರೇಶ್ವರ ಶ್ರೀ ವಾಸವಿ ಕನ್ನಿಕಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ನಗರೇಶ್ವರ ಅರ್ಯ ವೈಶ್ಯಸಂಘ ಮಾನ್ವಿ ವತಿಯಿಂದ ಅಯೋಜಿಸಲಾದ ಮಂತ್ರಾಲಯದ ಶ್ರೀ ರಾಘವೇಂದ್ರ ತಿರ್ಥ ಶ್ರೀ ಪಾದಂಗಳವರ ಸನ್ನಿಧಾನಕ್ಕೆ ಪಾದಯಾತ್ರೆ ಅಂಗವಾಗಿ ಶ್ರೀನಗರೇಶ್ವರ ಸ್ವಾಮಿಗೆ ವಿಶೇಷ ಪೂಜೆ. ಮಹಾಮಂಗಳಾರತಿ, ಗೋಪೂಜೆ ಸಲ್ಲಿಸಲಾಯಿತು ನಂತರ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮಂತ್ರಾಲಯ ಪಾದಯಾತ್ರೆಗೆ ಚಾಲನೆ ನೀಡಿ ಆರ್ಶೀವಾಚನ ನೀಡಿ ತುಂಗಭದ್ರ ನದಿ ತೀರದಲ್ಲಿನ ಪುಣ್ಯಕ್ಷೇತ್ರವಾಗಿರುವ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳು ಸಾಶಾರೀರರಾಗಿ ವೃಂದವನವನ್ನು ಪ್ರವೇಶಮಾಡಿ ಇಂದಿಗೂ ಕೂಡ ನಿತ್ಯ ಮಂತ್ರಾಲಯದ ಶ್ರೀ ರಾಘವೇಂದ್ರ ಯತಿಗಳ ವೃಂದವನ ದರ್ಶನಕ್ಕೆ ಬರುವ ಭಕ್ತರಿಗೆ ಶ್ರೀ ರಾಘವೇಂದ್ರಸ್ವಾಮಿಗಳು ಅನುಗ್ರಹವನ್ನು ನೀಡುತ್ತಿದ್ದಾರೆ ಮಾನ್ವಿಯ ಶ್ರೀ ನಗರೇಶ್ವರ ಅರ್ಯ ವೈಶ್ಯಸಂಘ ಮಾನ್ವಿ ವತಿಯಿಂದ 2ನೇ ವರ್ಷದ ಪಾದಯಾತ್ರೆಗೆ ಎಲ್ಲಾ ಸಮುದಾಯದ ಭಕ್ತರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಸಮುದಾಯಗಳ ನಡುವೆ ಸೌಹಾರ್ಧತೆ ಹಾಗೂ ಭವೈಕ್ಯತೆ, ವಿಶ್ವಾಸ ಮೂಡುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಅನುಗ್ರಹ ಸಂದೇಶವನ್ನು ನೀಡಿದರು.
ಶ್ರೀ ನಗರೇಶ್ವರ ಅರ್ಯ ವೈಶ್ಯಸಂಘ ಮಾನ್ವಿ ತಾ.ಅಧ್ಯಕ್ಷರಾದ ಆರ್.ಮುತ್ತುರಾಜ ಶೆಟ್ಟಿ ,ಕಾರ್ಯದರ್ಶಿ ಬಿಚ್ಚಾಲಿ ಈರಣ್ಣ ಶೆಟ್ಟಿ , ಪುರಸಭೆ ಹಿರಿಯ ಸದಸ್ಯರಾದ ರಾಜಾ ಮಹೇಂದ್ರನಾಯಕ ಸೇರಿದಂತೆ 700ಕ್ಕೂ ಹೆಚ್ಚು ಸರ್ವ ಸಮುದಾಯಗಳ ಪಾದಯಾತ್ರಿಗಳು ಭಾಗವಹಿಸಿದರು.
ಮಾನ್ವಿ: ಪಟ್ಟಣದ ಶ್ರೀ ನಗರೇಶ್ವರ ಶ್ರೀ ವಾಸವಿ ಕನ್ನಿಕಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪಾದಯಾತ್ರೆಗೆ ಚಾಲನೆ ನೀಡಿದರು.

