ಮಾನ್ವಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶ್ರೀ ಉದ್ಬವ ಆಂಜನೇಯ ಹಮಾಲರ ಸಂಘ ಎ.ಐ.ಟಿ.ಯು.ಸಿ, ಸಂಯೋಜಿತ ಮಾನ್ವಿ ಸಂಯುಕ್ತಾಶ್ರಯದಲ್ಲಿ ನಡೆದ ಎ.ಪಿ.ಎಂ.ಸಿ. ಹಮಾಲರಿಗೆ ನಿವೇಶನಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹಮಾಲಿ ಕಾರ್ಮಿಕರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿ ತಾಲೂಕಿನ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಹಮಾಲಿ ವೃತ್ತಿ ಮಾಡುತ್ತಿರುವ ನೂರಾರು ಹಮಾಲಿ ಕಾರ್ಮಿಕರಿಗೆ ತಮ್ಮದೆ ಒಂದು ಸೂರು ಇರಬೇಕು ಎನ್ನುವ ಉದ್ದೇಶದಿಂದ 2003 ರಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಜಾನುವಾರು ಮಾರುಕಟ್ಟೆ ಹಾಗೂ ಗೋಧಮು,ಸೇರಿದಂತೆ ಹಮಾಲಿ ಕೂಲಿ ಕಾರ್ಮಿಕರಿಗಾಗಿ 10 ಎಕರೆ ಭೂಮಿಯನ್ನು ಖರೀದಿಸಿ 120 ನಿವೇಶನಗಳನ್ನು ರೂಪಿಸಲಾಗಿತ್ತು ನಂತರದಲ್ಲಿ ಬಂದ ಶಾಸಕರು ಹಮಾಲಿ ಕಾರ್ಮಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡದೆ ಇರುವುದರಿಂದ ಹಮಾಲಿ ಕಾರ್ಮಿಕರು ನಿವೇಶನ ವಂಚಿತರಾಗಬೇಕಾಯಿತು. ಈ ಕುರಿತು ಶ್ರೀ ಉದ್ಬವ ಆಂಜನೇಯ ಹಮಾಲರ ಸಂಘದ ಪ್ರತಿನಿಧಿಗಳು ನನ್ನ ಗಮನಕ್ಕೆ ತಂದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿ ಅರ್ಜಿ ಸಲ್ಲಿಸಿದ ಅರ್ಹ 73 ಫಲಾನುಭವಿಗಳಿಗೆ ಇಂದು ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ ಪುರಸಭೆ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ಹಮಾಲರಿಗೆ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಡಲಾಗುವುದು. ಹಾಗೂ ಹಮಾಲರ ವಸತಿ ಪ್ರದೇಶದಲ್ಲಿ ರಸ್ತೆ,ನೀರು,ವಿದ್ಯುತ್, ಸೇರಿದಂತೆ ಅಗತ್ಯವಿರುವ ಎಲ್ಲಾ ನೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು ಉಳಿದಿರುವ ನಿವೇಶನಗಳನ್ನು ಅರ್ಹ ಫಲಾನುಭಾವಿಗಳಿಗೆ ಹಂಚಿಕೆ ಮಾಡುವುದಕ್ಕೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಸೂಚಿಸಲಾಗುವುದು.
ರಾಜ್ಯದಲ್ಲಿ ಕಾಂಗ್ರೇಸ್ ನೇತೃತ್ವದಲ್ಲಿ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಬಡವರ ಹಾಗೂ ಮಹಿಳೆಯರ ಸಬಲಿಕರಣಕ್ಕಾಗಿ ಜಾರಿಗೆ ತಂದ ಪಂಚಾಗ್ಯರಂತಿಗಳಿಂದ ಬಡಜನರ ಜೀವನ ಮಟ್ಟ ಸುಧರಿಸುತ್ತಿದೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿರುವ 10 ಕೇಜಿ ಅಕ್ಕಿಯಲ್ಲಿ ಪಡಿತರ ಕಾರ್ಡುದಾರರು 5ಕೇಜಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಸರ್ಕಾರವು 10ಕೆಜಿ.ಅಕ್ಕಿಯಲ್ಲಿ 5ಕೇಜಿ ಅಕ್ಕಿಯನ್ನು ಕಡಿತಗೋಳಿಸಿ ಗೃಹಿಣಿಯರಿಗೆ ಅಗತ್ಯವಿರುವ ಎಣ್ಣೆ,ಉಪ್ಪು,ಸಕ್ಕರೆ,ಬೆಳೆ,ಸೇರಿದಂತೆ 5ಖಾದ್ಯ ಪದಾರ್ಥಗಳನ್ನು ಒಳಗೊಂಡ ಇಂದಿರಾ ಕೀಟ್‌ಅನ್ನು ನೀಡುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಮಕ್ಕಳು ಶಾಲೆಗೆ ಗೈರಾಗುವುದು ಕಡಿಮೆಯಾಗಿದ್ದು. ಜೀವನ ಮಟ್ಟ ಸುಧರಾಣೆಯಾಗುತ್ತಿದೆ. ರಾಜ್ಯ ಸರ್ಕಾರದ ಯೋಜನೆಗಳು ರಾಜ್ಯದ ಎಲ್ಲಾ ಹಿಂದುಳಿದ ವರ್ಗದ ಜನರಿಗೆ ನೆರವಾಗುತ್ತಿವೆ ತಾಲೂಕಿನಲ್ಲಿ ಹೈವೆ ರಸ್ತೆಗಳ ಸುಧಾರಣೆ,ರೈಲು ಮಾರ್ಗಗಳಿಂದ ಹೆಚ್ಚಿನ ಅಭಿವೃದ್ದಿಯಾಗಲಿದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯನಾಯಕ ಮಾತನಾಡಿ ನಾನು ಎ.ಪಿ.ಎಂ.ಸಿ.ಅಧ್ಯರಾಗಿದ ಅವಧಿಯಲ್ಲಿ ಹಮಾಲಿ ಕಾರ್ಮಿಕರಿಗೆ ನಿವೇಶನಕ್ಕಾಗಿ ಜಂಇನು ಖರೀದಿಸಲಾಗಿತ್ತು .ಇಂದು ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ. ತಾಲೂಕಿನ ಅಭಿವೃದ್ದಿಗೆ ರಾಜ್ಯದ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡುತ್ತಿದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಉದ್ಬವ ಆಂಜನೇಯ ಹಮಾಲರ ಸಂಘ ಎ.ಐ.ಟಿ.ಯು.ಸಿ, ಸಂಯೋಜೀತ ಮಾನ್ವಿ ವತಿಯಿಂದ ರಾಜ್ಯ ಸಚಿವರಾದ ಎನ್.ಎಸ್.ಬೋಸರಾಜು,ಶಾಸಕ ಹಂಪಯ್ಯನಾಯಕ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತಾಧಿಕಾರಿ ರವಿಚಂದ್ರ, ಕಾರ್ಯದರ್ಶಿ ರಂಗನಾಥ ದೇಸಾಯಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಯೋಪ್ರ ಅಧ್ಯಕ್ಷರಾದ ಅಬ್ದುಲ್ ಗಫೂರಸಾಬ್, ರಾಜಾ ಸುಭಾಶ್ಚಂದ್ರನಾಯಕ, ಬಾಲಸ್ವಾಮಿಕೊಡ್ಲಿ, ಜಿಲ್ಲಾ ಹಿಂದುಳಿದ ಅಯೋಗದ ಅಧ್ಯಕ್ಷರಾದ ಕೆ.ಶಾಂತಪ್ಪ, ಗ್ಯಾರಂಟಿ ಸಮಿತಿಯ ತಾ.ಅಧ್ಯಕ್ಷರಾದ ಬಿ.ಕೆ.ಅಮರೇಶಪ್ಪ, ಮುಖಂಡರಾದ ಶರಣಪ್ಪ ಕೆ.ಗುಡದಿನ್ನಿ,.ಕೆ.ಬಸವಂತಪ್ಪ, ಮಾಜಿ ಎ.ಪಿ.ಎಂ.ಸಿ ಸದಸ್ಯರಾದ ಶಿವರಾಜ ನಾಯಕ,ಸುಬ್ಬರೆಡ್ಡಿ, ಎ.ಐ.ಟಿ.ಯು.ಸಿ ರಾಜ್ಯ ಕಾರ್ಯದರ್ಶಿ ಬಾಷುಮಿಯಾ,ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾ.ಅಧ್ಯಕ್ಷೆ.ಚನ್ನಮ್ಮ, ಶ್ರೀ ಉದ್ಬವ ಆಂಜನೇಯ ಹಮಾಲರ ಸಂಘ ಎ.ಐ.ಟಿ.ಯು.ಸಿ, ಸಂಯೋಜಿತ ಮಾನ್ವಿ ಅಧ್ಯಕ್ಷರಾದ ಹನುಮಂತ,ಕಾರ್ಯದರ್ಶಿ ಸಿದ್ದರಾಮಯ್ಯಸ್ವಾಮಿ ಸೇರಿದಂತೆ ಹಮಾಲಿ ಕಾರ್ಮಿಕರ ಕುಟುಂಬಗಳು ಭಾಗವಹಿಸಿದವು.

