ರಾಯಚೂರು ಜನವರಿ 08 (ಕರ್ನಾಟಕ ವಾರ್ತೆ): ರಾಯಚೂರು ನಗರದ ವಾರ್ಡ್ ನಂಬರ್: 32ರ ಅಲಿನಾಯಕ ಕಾಲೋನಿಯ ನಿವೇಶನ ಮುನ್ಸಿಪಾಲ್ ನಂ: 12-12-279/65ರಲ್ಲಿ ಅಬ್ದುಲ್ ರೋಫ್ ಪಾಷಾ ಇವರು ದಾರ್ಮಿಕ ಉದ್ದೇಶಕ್ಕಾಗಿ ಪ್ರೇಯರ್ ಹಾಲ್ ಕಟ್ಟಡವನ್ನು ನಿರ್ಮಾಣ ಮಾಡಲು ಅರ್ಜಿಸಲ್ಲಿಸಿದ್ದಾರೆ.
ಈ ಸ್ಥಳದಲ್ಲಿ ನಕ್ಷೆ ಪ್ರಕಾರ ಕಟ್ಟಡ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿರುವುದರಿಂದ ಇದಕ್ಕೆ ಅಕ್ಕ-ಪಕ್ಕದ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ ಈ ನೋಟೀಸ್ ಪ್ರಕಟಿಸಿದ 15 ದಿನಗಳ ಒಳಗಾಗಿ ದಾಖಲೆಗಳೊಂದಿಗೆ ಈ ಕಾರ್ಯಾಲಯಕ್ಕೆ ದೂರು ಸಲ್ಲಿಸಬಹುದಾಗಿದೆ. ಅವಧಿ ಮುಗಿದ ಮೇಲೆ ಬಂದ ಆಕ್ಷೇಪಣೆ ಅಥವಾ ತಕರಾರು ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವುದಿಲ್ಲ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *