ಮಾನ್ವಿ : ಪಟ್ಟಣದ ಜಯನಗರದಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಆವರಣದಲ್ಲಿ ಜನಯನಗರದ ನಿವಾಸಿಗಳಾದ ಮಾನ್ವಿ ಪೊಲೀಸ್ ಠಾಣೆಯ ಎ.ಎಸ್.ಐ. ಸೂಗಪ್ಪ ಕಾಡ್ಲೂರ ರವರನ್ನು ವಾರ್ಡಿನ ನಿವಾಸಿಗಳು ಹಾಗೂ ಶ್ರೀ ಬಸವೇಶ್ವರ ಯುವಕ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ವಕೀಲರಾದ ಸಿದ್ದಲಿಂಗಪ್ಪ ಮಾತನಾಡಿ ಮಾನ್ವಿ ಪೊಲೀಸ್ ಠಾಣೆಯಲ್ಲಿ ಬಹು ವರ್ಷಗಳಿಂದ ಉತ್ತಮ ಸೇವೆಸಲ್ಲಿಸಿ ಎ.ಎಸ್.ಐ.ಆಗಿ ಸೂಗಪ್ಪ ಕಾಡ್ಲೂರ ರವರು ಪದೋನ್ನತಿ ಹೊಂದಿರುವುದು ಅತ್ಯಂತ ಸಂತೋಷದ ವಿಷಯವಾಗಿದ್ದು ಅವರು ತಮ್ಮ ವೃತ್ತಿ ಜೀವನದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಸೇವೆಯನ್ನುಸಲ್ಲಿಸಿ ಉನ್ನತ ಹುದ್ದೆಗಳನ್ನು ಪಡೆಯಲಿ ಎಂದು ಆಶಿಸಿದರು.
ಜಯನಗರ ವಾರ್ಡಿನ ಪ್ರಮುಖರಾದ ಸಂಗಪುರ ಕಿದ್ಮತ್ ಹಿರೇಮಠದ ಶ್ರೀ ವೀರಭದ್ರಯ್ಯಸ್ವಾಮಿಗಳು,ರಾಮಣ್ಣ ನಾಯಕ, ರಾಜಶೇಖರಯ್ಯಸ್ವಾಮಿ, ಶಿವಕುಮಾರ ಪಾಟೀಲ್, ದೇವರೆಡ್ಡಿ, ಚನ್ನಬಸವ ಕೋಡ್ಲಿ, ಲಿಂಗರಾಜ ಗಡಿಗಿ, ಈರಣ್ಣನಾಯಕ, ಸಿದ್ದಯ್ಯ ಕಳ್ಳಿಮಠ,ಅಮರೇಶಸಾಲಿಮಠ ಗಾವಾಯಿಗಳು, ಅಮರೇಶನಾಯಕ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *