ಸಿಂಧನೂರು : ರಾಮಕೃಷ್ಣ ಆಶ್ರಮ ಸಿಂಧನೂರುನಲ್ಲಿ ಜ4 ಸಂಜೆ ಹುಣ್ಣಿಮೆಯ ಅಂಗವಾಗಿ “ವಿವೇಕ ಪೂರ್ಣಿಮೆ’’ ಹಾಗೂ “ಸಚ್ಚಿಂತನ’’ ಕಾರ್ಯಕ್ರಮವನ್ನು ಭಕ್ತಿಯಿಂದ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ರಾಜಶೇಖರ ರೆಡ್ಡಿ, ಸಾತ್ವಿಕ್ ಮೆಡಿಕಲ್ಸ್, ಸಿಂಧನೂರು ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಮ್ಮ ಭಾಷಣದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಕೈಗೊಂಡಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಸಚ್ಚಿಂತನ ಕಾರ್ಯಕ್ರಮದ ಉಪನ್ಯಾಸಕರಾದ ಪರಮ ಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ್, ಅಧ್ಯಕ್ಷರು – ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ-ವಿಜಯಪುರ, ಅವರು ಮನುಷ್ಯನ ಜೀವನದ ಸಾಕ್ಷಾತ್ಕಾರಕ್ಕೆ ಅಗತ್ಯವಾದ ಆತ್ಮಜಾಗೃತಿ ಮತ್ತು ಆಧ್ಯಾತ್ಮಿಕ ಚಿಂತನೆಗಳ ಕುರಿತು ಸುದೀರ್ಘ ಹಾಗೂ ಮನನೀಯ ಉಪನ್ಯಾಸ ನೀಡಿದರು ಮತ್ತು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ನರೇಂದ್ರನಾಥ ವೈ, ಸದಸ್ಯರು – ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರ, ಅವರು ಆಶ್ರಮದ ನಿಸ್ವಾರ್ಥ ಸೇವಾ ಚಟುವಟಿಕೆಗಳ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಸಾಹುಕಾರ, ನಾಮನಿರ್ದೇಶಿತ ಸದಸ್ಯರು – ನಗರಸಭೆ ಸಿಂಧನೂರು, ಹಾಗೂ ಶ್ರೀ ನಾಗರಾಜ್ LVT, ಉದ್ಯಮಿ, ಕಾರಟಗಿ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್, ಆಶ್ರಮದ ಕಾರ್ಯಗಳು ಮತ್ತು ಕಳೆದ ಐದು ವರ್ಷಗಳಿಂದ ಆಶ್ರಮ ಸಾಗುತ್ತಿರುವ ಸೇವಾದಾರಿಯ ಕುರಿತು ಉಪನ್ಯಾಸ ನೀಡಿದರು.

Leave a Reply

Your email address will not be published. Required fields are marked *