ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ,ಸಿಂಧನೂರು. ವತಿಯಿಂದ ಸನ್ ರೈಸ್ ಡಿ ಫಾರ್ಮಸಿ ನರ್ಸಿಂಗ್ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ
2025-2026 ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ * ಸಂಗೀತ ಪರಂಪರೆ, ತತ್ವಪದ, ಜಾನಪದ ಸಾಹಿತ್ಯ,
ದಿ| ಶ್ರೀ ಬಸವನಗೌಡ ವೆಂಕಟರಾವ್ ಬಾದರ್ಲಿ ಸಿಂಧನೂರು. ರವರ ದತ್ತಿ
ದಿ|| ಶ್ರೀಮತಿ ಪುಷ್ಪಾವತಿ ಮಾಧುರಾವ್ ಸಿಂಧನೂರು. ರವರ ದತ್ತಿ
ದಿ|| ಶ್ರೀ ಬಸವನಗೌಡ ಮಾಲಿ ಪಾಟೀಲ್ ಹುಲ್ಲೂರ ಸಿಂಧನೂರು
ಇವರ ದತ್ತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಪಂಪನಗೌಡ ಬಾದರ್ಲಿ ಅವರು ಉದ್ಘಾಟನೆ ಮಾಡಿ ಮಾತನಾಡಿ ಕನ್ನಡ ನಾಡು ನುಡಿ ಜಲ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಇಂಥ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಕನ್ನಡದ ಉಳಿವಿಕೆಗೆ ಅತಿ ಹೆಚ್ಚಿನ ಸಹಾಯವಾಗಲಿದೆ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಚ್ ಎಫ್ ಮಸ್ಕಿ ವಹಿಸಿದ್ದರು ಅಧ್ಯಕ್ಷೀಯ ಭಾಷಣದಲ್ಲಿ ಸಂಗೀತ ಪರಂಪರೆ ತತ್ವಪದ ಜಾನಪದ ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಸುಂದರ ಜನಪದ ಹಾಡನ್ನು ಹಾಡುವುದರ ಮುಖಾಂತರ ರಸದೌತಣ ಉಣಿಸಿದರು ಕಾರ್ಯಕ್ರಮದಲ್ಲಿ ಶ್ರೀ ವೆಂಕನಗೌಡ ವಟ್ಗಲ್ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ಇವರು ಮಾತನಾಡಿ ಕಾರ್ಯಕ್ರಮದ ವಿಷಯ ಮಂಡನೆ ಮಾಡಿದರು ಮತ್ತು ಸಂಗೀತ ಪರಂಪರೆ ತತ್ವಪದ ಜಾನಪದದ ಈಗಿನ ಹಾಗೂ ಹಳೆಯ ಕಾಲದ ಸಾಹಿತ್ಯಕ್ಕೂ ಈಗಿರುವ ಸಾಹಿತ್ಯಕ್ಕೂ ಹಾಡುಗಳಿಗೂ ಹೋಲಿಕೆ ಮಾಡಿ ಸುಂದರ ಸಾಹಿತ್ಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹಾಸ್ಯದೊಂದಿಗೆ ಮಂಡನೆ ಮಾಡಿ ವಿದ್ಯಾರ್ಥಿಗಳ ಮನ ಸೆಳೆದರು. ಶ್ರೀಮತಿ ರಮಾದೇವಿ ಶಂಭೋಜಿ ಮುಖ್ಯ ಅತಿಥಿಯಾಗಿ ಆಗಮಿಸಿ ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ ದತ್ತಿ ಎಂದರೇನು ದತ್ತಿ ಕಾರ್ಯಕ್ರಮದ ಅರ್ಥ ಹಾಗೂ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ದತ್ತಿ ದಾನಿಗಳ ಮಹತ್ವ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಅದೇ ರೀತಿಯಾಗಿ ಮತ್ತೂರ್ವ ಮುಖಂಡರು ಹಾಗೂ ಅತಿಥಿಗಳಾದಂತ ಶ್ರೀ ಎಚ್ ಎನ್ ಬಡಿಗೇರ್ ಮಾತನಾಡಿ ಸರ್ವಜ್ಞನ ನುಡಿಗಳು ಪ್ರಸ್ತುತ ಕಾಲಮಾನದ ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಜನಪದ ಹಾಡನ್ನು ಹಾಡುವುದರ ಮುಖಾಂತರ ಜನಪದ ಸಾಹಿತ್ಯದ ಕಲೆಗೆ ಮೆರಗನ್ನು ನೀಡಿದರು. ಕಾರ್ಯಕ್ರಮದಲ್ಲಿ ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ ಡಾ. ನಾರಾಯಣಪ್ಪ ಮಾಡ ಶಿರವಾರ ತತ್ವ ಪದಗಾರರು ರಾಜ್ಯಮಟ್ಟ ಪ್ರಶಸ್ತಿ ಪುರಸ್ಕೃತರು ತತ್ವಪದಗಳನ್ನು ಹಾಡುವುದರ ಮುಖಾಂತರ ಕಾರ್ಯಕ್ರಮದಲ್ಲಿ ತತ್ವಪದ ಸಾಹಿತ್ಯದ ಬಗ್ಗೆ ವಿಷಯ ಮಂಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸದಸ್ಯರು ಹಾಗೂ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷರಾದ ಶ್ರೀಫಾನ್ ಕೆ ಅತ್ತಾರ್ ಅವರು ಮಾತನಾಡಿ ಕನ್ನಡದ ಸಾಹಿತ್ಯದ ಹಾಗೂ ನಾಟಕಗಳು ಬಯಲಾಟ ಈತರಹ ಕನ್ನಡಕ್ಕೆ ಮೆರೆಗು ನೀಡುವಂತಹ ಕಲೆಗಳಿಗೆ ಪ್ರೋತ್ಸಾಹ ನೀಡಬೇಕಾಗಿ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಮತ್ತೋರ್ವ ಅತಿಥಿಯಾದ ಶ್ರೀ ಲಿಂಗಪ್ಪ ಕಾಣೆಹಾಳ್ ವಜ್ರೇಶ್ವರಿ ಟ್ರೇಡರ್ಸ್ ವರ್ತಕರು ಇವರು ಸಹ ಸುಂದರ ಜಾನಪದ ಹಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು ಇದೇ ಸಂದರ್ಭದಲ್ಲಿ ಸನ್ ರೈಸ್ ಕಾಲೇಜಿನ ವಿದ್ಯಾರ್ಥಿ ಆದಂತಹ ಆಕಾಶ್ ಸಜ್ಜನ್ ಇವರು ಸ್ವತಃ ಸಾಹಿತ್ಯ ಬರೆದು ಜಾನಪದ ಹಾಡನ್ನು ಹಾಡಿದರು. ಕಾರ್ಯಕ್ರಮದ ಇದೇ ಸಂದರ್ಭದಲ್ಲಿ ಲಾಜರ್ ಸಿರಿಲ್ ಜಿ ಬರೆದಿರುವ ಪ್ರಥಮ ಚಿಕಿತ್ಸೆ ಪುಸ್ತಕ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ರೆಕಾರ್ಡ್ ಬುಕ್ ಚೈಲ್ಡ್ ಹೆಲ್ತ್ ನರ್ಸಿಂಗ್ ರೆಕಾರ್ಡ್ ಬುಕ್ ಇವುಗಳನ್ನು ಕ ಸಾ ಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಕೆ ಇವರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜೋಶಿ ಶಿಕ್ಷಕರು ಸ್ವಾಗತಿಸಿದರು ನಾಗರಾಜ್ ಹಳ್ಳಿಮರದ ಅವರು ಪ್ರಸ್ತಾವಿಕ ನುಡಿದರು…ಚಂದ್ರೇಗೌಡ ಹರಟನೂರ ಅವರು ದತ್ತಿ ದನಿಗಳನ್ನು ಪರಿಚಯಿಸಿದರು..
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ
ಶ್ರೀ ಹೆಚ್.ಎಫ್. ಮಸ್ಕಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಸಿಂಧನೂರು.
ಉದ್ಘಾಟಕರಾದ
ಮಾನ್ಯ ಶ್ರೀ ಪಂಪನಗೌಡ ಬಾದರ್ಲಿ , ಸಿಂಧನೂರು.
ವಿಷಯ ಮಾಡಿಸಿದ
ಶ್ರೀ ವೆಂಕನಗೌಡ ವಟಗಲ್ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು, ಸಿಂಧನೂರು,
ದತ್ತಿ ದಾನಿಗಳಾದ
ಮಾನ್ಯ ಶ್ರೀ ಹಂಪನಗೌಡ ಬಾದರ್ಲಿ ಶಾಸಕರು ವಿಧಾನಸಭಾ ಕ್ಷೇತ್ರ,ಸಿಂಧನೂರು.
ಶ್ರೀ ದಯಾನಂದರೆಡ್ಡಿ ಬಿಜಿ ಪಾಟೀಲ ಹುಲ್ಲೂರ ಸಿಂಧನೂರು.
ವೆಂಕಟರಾವ್ ಕೃಷ್ಣ ಕಮರ್ಷಿಯಲ್ಸ್ ಸಿಂಧನೂರು,
ಮುಖ್ಯ ಅತಿಥಿಗಳಾಗಿ ಆಗಮಿಸಿದ
ಶ್ರೀ ಶಿವಕುಮಾರ ಜವಳಿ ಮುಖಂಡರು, ಸಿಂಧನೂರು.
ಶ್ರೀಮತಿ ರಮಾದೇವಿ ಶಂಭೋಜಿ ಜಿಲ್ಲಾ ಪ್ರತಿನಿಧಿ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು.
ಶ್ರೀ ಇರ್ಫಾನ್ ಕೆ. ಅಧ್ಯಕ್ಷರು ಸನ್ ರೈಸ್ ಡಿ-ಪ್ಯಾರಾಮೆಡಿಕಲ್ ಕಾಲೇಜ್, ಸಿಂಧನೂರು.
ಶ್ರೀ ಹೆಚ್.ಎನ್. ಬಡಿಗೇರ ಮುಖಂಡರು ಸಿಂಧನೂರು,
ಶ್ರೀ ಶರಣಪ್ಪ ಬೆಂಗಿನಕಾಯಿ ಅಧ್ಯಕ್ಷರು ಬಸವ ಸಮಿತಿ, ಸಿಂಧನೂರು.
ಶ್ರೀ ನಾರಾಯಣಪ್ಪ ಮಾಡಶಿರವಾರ ತತ್ವ ಪದಕಾರರು ಸಿಂಧನೂರು.
ಶ್ರೀ ಸುಮಿತ್ ತಡಕಲ್ ಮುಖಂಡರು, ಸಿಂಧನೂರು,
ಶ್ರೀ ದುರುಗೇಶ ವರದಿಗಾರರು ರಾಯಚೂರು ಸುದ್ದಿಬಿಂಬ, ಸಿಂಧನೂರು
ಶ್ರೀ ಅಂಗಪ್ಪ ಕಾನಿಹಾಳ ವಜೇಶ್ವರಿ ಟ್ರೇಡರ್ಸ್ ಎ.ಪಿ.ಎಮ್.ಸಿ ಗಂಜ ವರ್ತಕರು, ಸಿಂಧನೂರು
ಕಾರ್ಯಕ್ರಮ ನಿರೂಪಿಸಿದ
ಲಾಜರ್ ಸಿರಿಲ್ ಪ್ರಾಂಶುಪಾಲರು ಸನ್ ರೈಸ್ ಡಿ-ಫಾರ್ಮಸಿ , ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜ್, ಸಿಂಧನೂರು.
. ಸನ್ ರೈಸ್ ಕಾಲೇಜಿನ ಎಲ್ಲ ವಿಭಾಗದ ಪ್ರಾಚಾರ್ಯರು ಎಲ್ಲಾ ವಿಭಾಗದ ಉಪನ್ಯಾಸಕರು,
ಸನ್ ರೈಸ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು , ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು


