ಮಾನ್ವಿ: ಮೌಲಾನಾ ಅಬ್ದುಲ್ ಕಲಾಂ ಆಜಾದ್ ಬ್ರಿಗೇಡ್ ಮಾನವಿ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಜಮೀಲ್ ಇಸ್ಮಾಯಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಜ್ಮೀರ್ ಪಾಷಾ ಅವರು ನೇಮಕಗೊಂಡಿದ್ದಾರೆ.
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಬ್ರಿಗೆಡ್ ನ ರಾಯಚೂರು ಜಿಲ್ಲಾ ಅಧ್ಯಕ್ಷ ಸೈಯದ್ ಹುಸೇನ್ ಸಾಹೇಬ್ ಅವರ ನೇತೃತ್ವದಲ್ಲಿ ಮಾನ್ವಿಯಲ್ಲಿ ನಡೆದ ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕ ಘಟಕಕ್ಕೆ ನೂತನ ಅಧ್ಯಕ್ಷ ಸೇರಿದಂತೆ ಈ ಕೆಳಗಿನ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮಾನವಿ ತಾಲೂಕಿನ ನೂತನ ಅಧ್ಯಕ್ಷರಾಗಿ ಜಮೀರ್ ಇಸ್ಮಾಯಿಲ್, ಉಪಾಧ್ಯಕ್ಷರಾಗಿ ಸೈಯದ್ ಸಲೀಂ ಪಾಷ, ತಾಲೂಕ ಪ್ರಧಾನ ಕಾರ್ಯದರ್ಶಿ ಅಜ್ಜಿರ ಪಾಷ ಇವರನ್ನು ನೇಮಕಗೊಳಿಸಿ. ತಕ್ಷಣ ಬ್ರಿಗಡ್ನ ತತ್ವ ಸಿದ್ದಾಂತ ಮತ್ತು ಮೌಲಾನ ಅಬುಲ್ ಕಲಾಂ ಆಜಾದ್ ಅವರ ತತ್ವ ಸದ್ಧಾಂತಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯೊನ್ಮಖರಾಗುವಂತೆ ಸೂಚಿಸಿ ಆದೇಶ ಪತ್ರಗಳನ್ನು ಜಿಲ್ಲಾ ಅಧ್ಯಕ್ಷ ಸೈಯದ್ ಹುಸೇನ್ ಸಾಹೇಬ್ ಅವರು ವಿತರಿಸಿ ಅಭಿನಂದಿಸಿದರು.

