ಮಾನ್ವಿ: ಪಟ್ಟಣದ ಕಲ್ಯಾಣ ರ‍್ನಾಟಕ ರಸ್ತೆ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಲೊಯೋಲಾ ಸಾಮಾಜ ಸೇವಾ ಕ್ಲಬ್ ವತಿಯಿಂದ ಅಭಿವೃದ್ದಿ ಪಡಿಸಿದ ತಾಯಿ ಎದೆ ಹಾಲು ಉಣಿಸುವ ಕೊಠಡಿಯನ್ನು ಮಾನ್ವಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಂ. ನಾಗರಾಜ್ ಉದ್ಘಾಟಿಸಿ ಮಾತನಾಡಿ ಮಾನ್ವಿ ಪಟ್ಟಣದಲ್ಲಿ ನಿತ್ಯ ಸಾವಿರಾರು ಜನ ಮಹಿಳೆಯರು ಪ್ರಾಯಾಣಿಸುತ್ತಾರೆ ಅವರಲ್ಲಿ ಶಿಶುವಿನ ತಾಯಂದಿರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಶಿಶು ಎದೆ ಹಾಲು ಉಣಿಸಲು ಒಂದು ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು ನಂತರದಲ್ಲಿ ಲೊಯೋಲಾ ಸಾಮಾಜ ಸೇವಾ ಕ್ಲಬ್ ಮೂಲಕ ಶಾಲೆಯ ವಿದ್ಯರ‍್ಥಿಗಳು ದೇಣಿಗೆ ಮೂಲಕ ಸಂಗ್ರಹಿಸಿದ ಹಣದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಿರುವುದರಿಂದ ತಾಯಂದಿರಿಗೆ ತಮ್ಮ ಶಿಶುಗಳಿಗೆ ಹಾಲುಣಿಸುವುದಕ್ಕೆ ತುಂಬ ಆನುಕೂಲವಾಗಿದೆ ಎಂದು ತಿಳಿಸಿದರು.
ಲೊಯೋಲಾ ಶಾಲೆಯ ನರ‍್ದೇಶಕರಾದ ಫಾ. ಸಿರಿಲ್ ರಾಜ್ ಎಸ್.ಜೆ. ಮಾತನಾಡಿ ಶಾಲೆಯ ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವುದಕ್ಕಾಗಿ ಲೊಯೋಲಾ ಸಾಮಾಜ ಸೇವಾ ಕ್ಲಬ್ ವತಿಯಿಂದ ಶಾಲೆಯ ವಿದ್ಯರ‍್ಥಿಗಳಿಂದ ಸಂಗ್ರಹಿಸಿದ ದೇಣಿಗೆಯ ಮೂಲಕ ಮಾನ್ವಿ ಬಸ್ ನಿಲ್ದಾಣದಲ್ಲಿ ತಾಯಿ ಎದೆ ಹಾಲು ಉಣಿಸುವ ಕೊಠಡಿಯನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ತಿಳಿಸಿದರು.
ಕರ‍್ಯಕ್ರಮದಲ್ಲಿ ಲೊಯೋಲ ಪಿ.ಯು. ಕಾಲೇಜಿನ ಪ್ರಾಚರ‍್ಯರಾದ ಫಾ. ಪ್ರವೀಣ್ ಕುಮಾರ್ ಎಸ್.ಜೆ. , ಉಪ ಪ್ರಾಚರ‍್ಯರಾದ ಶ್ರುತಿ, ಖಾಸಿಂ, ಸಾಮಾಜಿಕ ಸೇವಾ ಕ್ಲಬ್‌ನ ಮುಖ್ಯ ಸಂಚಾಲಕರಾದ ಸುಭಾಷ್ ಸಿಂಗ್, ಡೇವಿಡ್ ಕುಮಾರ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜುಲಿಯೆಟ್,ನರೇಂದ್ರ ಸಿಂಗ್, ಸಾರಿಗೆ ಸಂಸ್ಥೆಯ ಕಿರಿಯ ಸಹಾಯಕ ಬಸಯ್ಯ ಗಡ್ಡಿ,ನಿಯಂತ್ರಕರಾದ ರಾಮಂಜನೇಯ್ಯ, ಸಹಾಯಕರಾದ ಈರಪ್ಪ ಸೇರಿದಂತೆ ಲೊಯೋಲಾ ಶಾಲೆಯ ವಿದ್ಯರ‍್ಥಿಗಳು ಭಾಗವಹಿಸಿದರು.
ಮಾನ್ವಿ: ಪಟ್ಟಣದ ಕಲ್ಯಾಣ ರ‍್ನಾಟಕ ರಸ್ತೆ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ತಾಯಿ ಎದೆ ಹಾಲು ಉಣಿಸುವ ಕೊಠಡಿಯನ್ನು ಮಾನ್ವಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಂ. ನಾಗರಾಜ್ ಉದ್ಘಾಟಿಸಿದರು.

