ಲಿಂಗಸಗೂರು : ಜ. 2 ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿ ಸಿಕೊಂಡು ಸಿದ್ದು ನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮಾ ಕೋರೆಗಾಂವ್ ಯುದ್ಧವೀರರನ್ನು ನೆನೆಯುವುದಕ್ಕಾಗಿ ಜ.1ರಂದು ಪಟ್ಟಣದಲ್ಲಿ ಜೈ ಭೀಮ್ ರೆಜಿಮೆಂಟ್ ನಿಂದ ವಿಜಯೋತ್ಸವದ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯೋತ್ಸವ ಸಮಿತಿ ಅಧ್ಯಕ್ಷ ಆರ್. ಮಾನಸಯ್ಯ ಶತ ಶತಮಾನಗಳ ಸಿಟ್ಟನ್ನು ಸಿಡಿಮದ್ದಾಗಿಸಿಕೊಂಡು ಸಿದ್ದುನಾಕಾ ನೇತೃತ್ವದಲ್ಲಿ ಯುದ್ಧ ಗೆದ್ದ ಭೀಮ ಕೋರೆಗಾಂವ್‌ ಯುದ್ಧವೀರರನ್ನು ನೆನೆಯದೆ ಹೋದರೆ ಚರಿತ್ರೆ ಕ್ಷಮಿಸದು. ಜಾತಿ ಅಸ್ಪೃಶ್ಯತೆ ದಮನ ದಬ್ಬಾಳಿಕೆಯಿಂದ ಕುದಿಯುತ್ತಿದ್ದ ಮಹಾರರು, ಮರಾಠವಾಡದ ಬ್ರಾಹ್ಮಣ ವಾದಿ ಪೇಳ್ವೆಗಳನ್ನು ಮಣ್ಣು ಮುಕ್ಕಿಸಿ ಅಧಿಕಾರದಿಂದ ತೊಲಗಿಸಿದ ವಿರೋಚಿತ
ಇತಿಹಾಸವಿದೆ. ಜಾತಿವಾದ, ಅಸ್ಪೃಶ್ಯತೆ ಹಾಗೂ ಸಕಲ ತಾರತಮ್ಯಗಳ ವಿರುದ್ದ ನಡೆದ ಯುದ್ಧವಾಗಿದೆ. ಈ ಯುದ್ಧದಿಂದ ಮತ್ತು ಇದರ ವಿಜಯದಿಂದ ಈ ನಾಡಿನ ದಲಿತರು ವರ್ತಮಾನದ ಜಾತಿ ವಿನಾಶ, ವರ್ಗವಿನಾಶ, ಸರ್ವ ತಾರತಮ್ಯ ವಿನಾಶಗಳ ಹೋರಾಟಕ್ಕೆ ಮಹಾನ್ ಪ್ರೇರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ದಾನಪ್ಪ ಮಸ್ಕಿ, ಹೆಚ್.ಎನ್. ಬಡಿಗೇರ, ದೊಡ್ಡಪ್ಪ ಮುರಾರಿ, ಹೆಚ್ .ಬಿ.ಮುರಾರಿ, ಪಾಮಯ್ಯ ಮುರಾರಿ, ನಿಂಗಪ್ಪ ಪರಂಗಿ, ಪ್ರಭುಲಿಂಗ ಮೇಗಳಮನಿ, ಶರಣಪ್ಪ ಹುನಕುಂಟಿ, ಸಂಜೀಪ ಚಲುವಾದಿ, ಆದೇಶ ನಗನೂರು, ಪರಶುರಾಮ ನಗನೂರು, ಶಿವಪ್ಪ ಮಾಚನೂರು, ಬಸವರಾಜ ಬಡಿಗೇರ, ಚಿದಾನಂದ ಚಲುವಾದಿ, ದುರಗಪ್ಪ ಅಗ್ರಹಾರ, ರಮೇಶ ಗೋಲ್ಡ್, ಡಿ.ಜಿ. ಶಿವು, ಗುಂಡಪ್ಪ ಯರಡೋಣಾ ಸೇರಿ ನೂರಾರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *