ರಾಯಚೂರು ಡಿಸೆಂಬರ್ 31 (ಕರ್ನಾಟಕ ವಾರ್ತೆ): ವಿಕಲಚೇತನರು ಸರ್ಕಾರದಿಂದ ಕೊಡುವ ತ್ರಿಚಕ್ರ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕರಾದ ಎ.ವಸಂತ ಕುಮಾರ್ ಅವರು ಹೇಳಿದರು.
ಡಿಸೆಂಬರ್ 31ರ ಬುಧವಾರ ದಂದು ನಗರದ ಮಂತ್ರಾಲಯ ರಸ್ತೆಯ ಐ.ಬಿಯಲ್ಲಿ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಕಲಚೇತನರಿಗೆ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ವಿಕಲಚೇತನರ ಬಗ್ಗೆ ಸಮಾಜವು ಸೌಜನ್ಯದಿಂದ ವರ್ತಿಸಬೇಕು. ಅವರ ಕುರಿತು ವಿಶೇಷ ಕಾಳಜಿ ವಹಿಸಬೇಕಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಸರಕಾರದಿಂದ ಸಿಗುವ ವಿವಿಧ ಯೋಜನೆಗಳನ್ನು ಸಹ ವಿಕಲಚೇತನರಿಗೆ ಒದಗಿಸಿ ಕೊಡಲು ಪ್ರಾಮಾಣಿಕವಾಗಿ ಸೇವೆ ಮಾಡಲಾಗುವುದೆಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾದ ರಝಾಕ್ ಉಸ್ತಾದ್, ಮುಖಂಡರಾದ ಅಸ್ಲಂ ಪಾಶಾ, ಅಂಜಿನ ಕುಮಾರ, ಕೆ.ಇ.ಕುಮಾರ, ರಮೇಶ ರೋಸ್ಲಿ, ಸತ್ಯನಾಥ, ಮೊಹಮ್ಮದ ಉಸ್ಮಾನ, ಸೈಯದ ಸುಲ್ತಾನ, ಖಾಜಾ ಮೊಯಿನುದ್ದೀನ, ದೀಪಕ ರೆಡ್ಡಿ, ಮೊಹಮ್ಮದ ರಫಿ, ಮುನಿಯಪ್ಪ, ನರಸಿಂಹಲು, ನಾಗರಾಜ ಹಾಗೂ ಇತರರು ಇದ್ದರು.


