ರಾಯಚೂರು ಡಿಸೆಂಬರ್ 30 (ಕರ್ನಾಟಕ ವಾರ್ತೆ): ಯಾದಗಿರಿ ರೈಲ್ವೇ ನಿಲ್ದಾಣದ ವೇದಿಕೆ ನಂಬರ್ 01 ರಲ್ಲಿ ಡಿಸೆಂಬರ್ 26ರ ಬೆಳಿಗ್ಗೆ 7.10ಗಂಟೆಗೆ ಅಸ್ವಸ್ತಗೊಂಡಿದ್ದ ಅಪರಿಚಿತ ಸುಮಾರು 70 ವರ್ಷದ ಗಂಡಸ್ಸು ಯಾವುದೋ ವಯೋಸಹಜ ಖಾಯಿಲೆಯಿಂದ ಬಳಲಿ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ಈ ಕುರಿತು ರಾಯಚೂರಿನ ರೈಲ್ವೇ ಠಾಣೆಯಲ್ಲಿ ಯು.ಡಿ.ಆರ್ ನಂ:72/2025 ಯು/ಎಸ್ 194 ಬಿಎನ್‌ಎಸ್‌ಎಸ್ ರಿತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವ್ಯಕ್ತಿಯನ್ನು ಯಾದಗಿರಿಯ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಯಾವುದೋ ವಯೋಸಹಜ ಖಾಯಿಲೆಯಿಂದ ಬಳಲಿ ಸ್ವಾಭಾವಿಕವಾಗಿ ಮೃತಪಟ್ಟದ್ದಾರೆ. ಮೃತದೇಹ ದೋರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಮೃತನ ವಾರುಸುದಾರ ಪತ್ತೆ ಹಾಗೂ ಪಿ.ಎಂ.ಇ. ಸಲುವಾಗಿ ಮೃತದೇಹಗಳನ್ನು ಯಾದಗಿರಿ ಯೀಮ್ಸ್ ಜಿಲ್ಲಾ ಆಸ್ಪತ್ರೆಯ ಶೀತಲ ಶವಗಾರದಲ್ಲಿ ಇಡಲಾಗಿದೆ.
ಅಪರಿಚಿತ ಗಂಡಸ್ಸು ವಯಸ್ಸು ಸುಮಾರು 70 ವರ್ಷ, ಎತ್ತರ ಸುಮಾರು 5.4 ಅಡಿ, ಉದ್ದ ಮುಖ, ಉದ್ದನೆಯ ಮೂಗು, ಕಪ್ಪು ಕಣ್ಣುಗಳು, ತಲೆಯಲ್ಲಿ 2 ಇಂಚು ಬಿಳಿ ಕೂದಲು, 2 ಇಂಚು ಬಿಳಿ ಗಡ್ಡ ಮೀಸೆ ಬಿಟ್ಟಿದ್ದು, ಬಡುಕಲು ಶರೀರ ಹೊಂದಿರುತ್ತಾನೆ.
ಒಂದು ನೀಲಿ ಬಣ್ಣ ಗೆರೆಯುಳ್ಳ ಮಾಸಿದ ಬಿಳಿಯ ಶರ್ಟು, ಒಂದು ಕಪ್ಪು ಬಣ್ಣದ ಪ್ಯಾಂಟು ಒಂದು ಕೆಂಪು ಮತ್ತು ನೀಲಿ ಬಣ್ಣ ಮಿಶ್ರಿತ ಬಟ್ಟೆಯನ್ನು ಧರಿಸಲಾಗಿದೆ. ಕೈಯಲ್ಲಿ ಒಂದು ಹಳೆಯ ದಾರವನ್ನು ಹೊಂದಲಾಗಿದೆ.
ಈ ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೋಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ:08532 231716 ಅಥವಾ ಮೊಬೈಲ್ ಸಂಖ್ಯೆ: 9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ರೈಲ್ವೆ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

