RH No:3 ಗ್ರಾಮದ ಐಕಾನ್ ಫ್ಯೂಚರ್ ಸ್ಕೂಲ್ ನಲ್ಲಿ ನಡೆದ ಆರ್.ಎಚ್. ನಂ–1 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಯಶಸ್ವಿಯಾಗಿ ನೆರವೇರಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರ್.ಎಚ್. ನಂ 1 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿಸಿ ಪ್ರಥಮ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳು ಈ ಕೆಳಕಂಡ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ:
1. ಕಥೆ ಹೇಳುವುದು – ಪೂರ್ಣೇಶ್ಮಾ (ಪ್ರಥಮ ಸ್ಥಾನ)
2. ದೇಹಭಾಷೆ ಗೀತೆ ಬಿಂದುಶ್ರೀ (ಪ್ರಥಮ ಸ್ಥಾನ)
3. ಇಂಗ್ಲಿಷ್ ಕರ್ತವ್ಯ ಪಠಣ – ಗುರುತರುಣ್ ತೇಜ್ (ಪ್ರಥಮ ಸ್ಥಾನ)
4. ಅಭಿನಯ ಗೀತೆ – ಕುಮಾರಿ ಮಿಲೋನ (ಪ್ರಥಮ ಸ್ಥಾನ)
ಆರ್.ಎಚ್. ನಂ–1 ಶಾಲೆಯ ವಿದ್ಯಾರ್ಥಿಗಳ ಈ ಸಾಧನೆ ಶಿಕ್ಷಕರ ಮಾರ್ಗದರ್ಶನ, ಪೋಷಕರ ಬೆಂಬಲ ಮತ್ತು ಮಕ್ಕಳ ಪರಿಶ್ರಮದ ಫಲವಾಗಿದೆ. ಮುಂಬರುವ ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಕೂಡ ಇವರಿಗೆ ಉತ್ತಮ ಯಶಸ್ಸು ಸಿಗಲೆಂದು ಹಾರೈಸಲಾಗಿದೆ.

