ಪಗಡದಿನ್ನಿ – ರಕ್ತದಾನ ಶಿಬಿರ ಕಾರ್ಯಕ್ರಮ.
ಸಿಂಧನೂರು : ಪಗಡದಿನ್ನಿ ಗ್ರಾಮ ಪಂಚಾಯತ್ ಅರಿವು ಕೇಂದ್ರ, ಹಾಗೂ ದೇವರಗುಡಿ ಗ್ರಾಮದಲ್ಲಿ ಅಜೀಮ್ ಪ್ರೆಮಜೀ ಫೌಂಡೇಶನ್ ರಾಯಚೂರು ಹಾಗೂ ಶ್ರೀ ಶಕ್ತಿ ರಕ್ತ ಕೇಂದ್ರ ಸಿಂಧನೂರು ರವರ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಗಡದಿನ್ನಿ ಆವರಣದಲ್ಲಿ ರವಿವಾರ ಈ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್ ಬಸವರಾಜ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಶಾಲಾ ಮುಖ್ಯ ಗುರುಗಳಾದ ಪರಸಪ್ಪ ಮಾತನಾಡಿ ದಾನಗಳಲ್ಲಿ ರಕ್ತದಾನ ಮಹಾದಾನ ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರೂ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.
ನೊಬೆಲ್ ಕಾಲೇಜ್ ವಿದ್ಯಾರ್ಥಿ ಬಸನಗೌಡ 22 ಸಾರಿ ರಕ್ತದಾನ ಮಾಡಿ ಜೀವನ ಉಳಿಸುವುದರ ಜೊತೆಗೆ ಮಾನವೀಯತೆ ಮೆರೆದಿದ್ದಾನೆ. ಒಟ್ಟು 14 ಜನ ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ ಊರಿನ ಮುಖಂಡರಾದ ಶರಣೇಗೌಡ,ಬಸನಸಗೌಡ ಸಿಂಧನೂರು,ನಿರುಪಾದಿ, ಗ್ರಾಮ ಪಂ. ಸದಸ್ಯರಾದ ,ಪಂಪಾಪತಿ ,ದುಗ್ಗಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಶರಣಬಸವ,ಫೌಂಡೇಶನ್ ಸಂಚಾಲಕ ಅಯ್ಯನಗೌಡ, ನಿಕಟ ಪೂರ್ವ ಬಿಆರ್‌ಪಿ ರವಿ ಪವಾರ್, ಹಾಗೂ ಮೈನುದ್ದೀನ್, ಷಣ್ಮುಖ ಗೌಡ,
ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ,ಶಾಲಾ ಶಿಕ್ಷಕರು,ಕಾಲೇಜು ಉಪನ್ಯಾಸಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.

