ಯರಮರಸನಲ್ಲಿರುವ ಫೆಡರಲ್ ಶಿಕ್ಷಣ ಸಮೂಹಗಳ ವತಿಯಿಂದ ದಿನಾಂಕ: 19/11/2025 ರಂದು ಮಾಣಿಕ್ ಪ್ರಭು ದೇವಸ್ಥಾನದ ಅಂಧತ್ವವುಳ್ಳ ಶಾಲಾ ಮಕ್ಕಳಿಗೆ ದಿನನಿತ್ಯ ಉಪಯೋಗಿಸುವ ವಸ್ತುಗಳ ಕಿಟ್‌ನ್ನು ವಿತರಿಸಲಾಯಿತು.

ಶಾಲೆಯ ಈ ಸಂಧರ್ಭದಲ್ಲಿ ಅಂಧತ್ವವುಳ್ಳ ಶಾಲಾ ಮಕ್ಕಳಿಗೆ ಮುಖ್ಯಗುರುಗಳಾದ ಶ್ರೀಮತಿ.ರೇಖಾ ರವರು ಅಂಧತ್ವ ಮಕ್ಕಳ್ಳಲ್ಲಿ ಆಡಗಿರುವ ಪ್ರತಿಭೆ ಸಾಮನ್ಯ ಮಕ್ಕಳಿಗಿಂತ ಭಿನ್ನವಾಗಿದ್ದು ಕಂಡುಬರುತ್ತದೆ, ಈಗಾಗಿ ಸಾಮನ್ಯ ಮಕ್ಕಳ್ಳನ್ನು ಈ ಮಕ್ಕಳಿಗೆ ಹೋಲಿಸಿದಲ್ಲಿ ಸಂಪೂರ್ಣ ಪ್ರತಿಭೆ ಮತ್ತು ಚುರುಕುತನ ವ್ಯತ್ಯಸವಾಗಿ ಆಡುವಾದಗಲಿ, ಬರೆಯುವುದಾಗಲಿ, ಓದುವದಾಗಲಿ, ಕ್ರೀಡೆಯಲ್ಲಿಯಾಗಲಿ, ಸಾಮನ್ಯ ಸ್ಪರ್ದೆಗಳಲ್ಲಿ ಮುಂದಾಳತ್ವ ವಹಿಸಿರುವುದಕ್ಕೆ ಮನಸ್ಸಿನ ಏಕಾಗ್ರತೆಯೇ ಕಾರಣವೆಂದು ತಿಳಿಸಿದರು. ಸಂಸ್ಥೆಯ ಅದ್ಯಕ್ಷರಾದ ಶ್ರೀ. ಮೊಹ್ಮದ್ ಅಬ್ದುಲ್ ಹೈ ಫೀರೋಜ್ ಮಾತನಾಡಿ ಸಂಸ್ಥೆಯು ಕೈಗೊಂಡ ಈ ಈ ಕಾರ್ಯಕ್ರಮವನ್ನು ಪ್ರಶಂಸಿದರು, ಕಾರ್ಯನಿರ್ವಾಹಕ ನಿರ್ದೇಶಕಿ ಕು. ಶ್ರೀಲೇಖಾ ಹಾಗೂ ಶಾಲಾ ಮುಖ್ಯಗುರುಗಳು ಈ ಒಂದು ಕಾರ್ಯಕ್ರಮ ನಮ್ಮ ಶಾಲಾ ಮಕ್ಕಳಿಗೆ ತಮ್ಮ ತನು, ಮನದಿಂದ ನೀಡಿದ ದಿನನಿತ್ಯ ಉಪಯೋಗಿಸುವ ವಸ್ತುಗಳು ಹಂಚಿಕೊಂಡಿರುವುದು ನಮಗೆ ಸಂತಸ ಮೂಡಿದೆ ಎಂದರು. ಅಂಧತ್ವವುಳ್ಳ ಮಕ್ಕಳ್ಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಕೊಂಡಡಿದಾರು. ಕೊನೆಗೆ ಆ ಸಂಸ್ಥೆಯ ಶಿಕ್ಷಕರಾದ ಶ್ರೀ ಕಿರಣ್ ವಂದನಾರ್ಪಣೆಯನ್ನು ನೆರವೇರಿಸಿದರು. ಹಾಗೂ ಫೆಡರಲ್ ಪಬ್ಲಿಕ್ ಶಾಲೆಯ ಸಹ ಶಿಕ್ಷಕಿಯರು-ಭೋದಕೇತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *