ರಾಯಚೂರು ನವೆಂಬರ್ 19 (ಕರ್ನಾಟಕ ವಾರ್ತೆ): ನವೆಂಬರ್ 16 ರಿಂದ ನವೆಂಬರ್ 21ರವರೆಗೆ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ಸಂ:9 (ಎ), 15, 16, 17 ಮತ್ತು 18ರ ಅಡಿಯಲ್ಲಿನ ಕಾಲುವೆ ಜಾಲಗಳಿಗೆ 6 ದಿನಗಳ ಕಾಲ ಕಾಲುವೆ ಜಾಲಕ್ಕೆ ದ್ವಿ-ಋತು ಬೆಳೆಗಳಿಗಾಗಿ ನೀರು ಹರಿಸಲಾಗುವುದು.
2025-26ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿಗಾಗಿ, ಬಾಗಲಕೋಟ ಜಿಲ್ಲಾ ಉಸ್ತ್ತುವಾರಿ ಸಚಿವರು ಆಗಿರುವ ಅಬಕಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಆರ್.ಬಿ. ತಿಮ್ಮಾಪೂರ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 14 ರಂದು ವಿಕಾಸ ಸೌಧ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಗೌರವಾನ್ವಿತ ಆಹ್ವಾನಿತರು, ಎಲ್ಲಾ ಅಧಿಕಾರಿ ಸದಸ್ಯರು ಹಾಗೂ ವಿಶೇಷ ಆಹ್ವಾನಿತರೊಂದಿಗೆ ಸುಧೀರ್ಘ ಚರ್ಚಿಸಿದ ನಂತರ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನದಂತೆ ನೀರು ಹರಿಸಲು ನಿರ್ಣಯಿಸಲಾಗಿದೆ.
ಮುಂದುವರೆದ ನವೆಂಬರ್ 22 ರಿಂದ ಡಿಸೆಂಬರ್ 01ರವರೆಗೆ 10 ದಿನಗಳ ಕಾಲ ಕಾಲುವೆ ಜಾಲಗಳಿಗೆ ನೀರು ಹರಿಸುವುದನ್ನು ಬಂದ್ ಅನುಸರಿಸಿ 14 ದಿನಗಳ ಕಾಲಮಿತಿಯಲ್ಲಿ 2025-26ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ಡಿಸೆಂಬರ್ 02 ರಿಂದ 2026ರ ಏಪ್ರೀಲ್ 03ರವರೆಗೆ 14 ದಿನ ಚಾಲೂ ಹಾಗೂ 10 ದಿನಗಳ ಬಂದ್ ಪದ್ದತಿಯನ್ನು ಅನುಸರಿಸಿ 2026ರ ಏಪ್ರೀಲ್ 03ರವರೆಗೆ ನೀರನ್ನು ಹರಿಸಲಾಗುವುದು.
ಈ ಕಾಲುವೆಗಳು ಡಿಸೆಂಬರ್ 02ರಿಂದ ಡಿಸೆಂಬರ್ 15ರವರೆಗೆ ಒಟ್ಟು 14 ದಿನಗಳ ಕಾಲ, ಡಿಸೆಂಬರ್ 26 ರಿಂದ 2026ರ ಜನವರಿ 08ರವರೆಗೆ ಒಟ್ಟು 14 ದಿನಗಳ ಕಾಲ, ಜನವರಿ 19 ರಿಂದ ಫೆಬ್ರವರಿ 01ರವರೆಗೆ ಒಟ್ಟು 14 ದಿನಗಳ ಕಾಲ, ಫೆಬ್ರವರಿ 12 ರಿಂದ ಫೆಬ್ರವರಿ 25ರವರೆಗೆ ಒಟ್ಟು 14 ದಿನಗಳ ಕಾಲ, ಮಾರ್ಚ್ 08 ರಿಂದ ಮಾರ್ಚ್ 21ರವರೆಗೆ ಒಟ್ಟು 14 ದಿನಗಳ ಕಾಲ, ಹಾಗೂ ಏಪ್ರೀಲ್ 01 ರಂದ ಏಪ್ರೀಲ್ 03ರವರೆಗೆ ಓಟ್ಟು 03 ದಿನಗಳ ಕಾಲದಂತೆ ಒಟ್ಟು 73 ದಿಗಳ ಕಾಲ ಕಾಲುವೆಯು ಚಾಲೂ ಇರುತ್ತದೆ.
ಅದರಂತೆಯೆ ಡಿಸೆಂಬರ್ 16 ರಿಂದ ಡಿಸೆಂಬರ್ 25ರವರೆಗೆ ಒಟ್ಟು 10 ದಿನಗಳ ಕಾಲ, 2026ರ ಜನವರಿ 01 ರಿಂದ ಜನವರಿ 18ರವರೆಗೆ ಒಟ್ಟು 10 ದಿನಗಳ ಕಾಲ, ಮತ್ತು ಫೆಬ್ರವರಿ 02 ರಿಂದ ಫೆಬ್ರವರಿ 11ರವರೆಗೆ ಒಟ್ಟು 10 ದಿನಗಳ ಕಾಲ, ಫೆಬ್ರವರಿ 26 ರಿಂದ ಮಾರ್ಚ್ 07ರವರೆಗೆ ಒಟ್ಟು 10 ದಿನಗಳ ಕಾಲ, ಹಾಗೂ ಮಾರ್ಚ್ 22 ರಿಂದ ಮಾರ್ಚ್ 31ರವರೆಗೆ ಒಟ್ಟು 10 ದಿನಗಳ ಕಾಲದಂತೆ ಒಟ್ಟು 50 ದಿನಗಳಕಾಲ ಕಾಲುವೆ ಬಂದ ಇರುತ್ತದೆ.
2025-26ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನೀರನ್ನು ಡಿಸೆಂಬರ್ 02ರ ಮುಂಚಿತವಾಗಿಯೇ ಪ್ರಾರಂಬಿಸಲಾಗಿರುವುದರಿAದ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ಸಂ:9(ಎ), 15, 16, 17 ಮತ್ತು 18ರ ಅಡಿಯಲ್ಲಿನ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯವನ್ನು ಕೈಗೊಳ್ಳಲು ರೈತ ಬಾಂದವರಲ್ಲಿ ಕೊರಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ನಾರಾಯಣಪುರ ಬಲ ದಂಡೆ ಕಾಲುವೆ ವೃತ್ತಸಂಖ್ಯೆ;02ರ ಅಧೀಕ್ಷಕ ಅಭಿಯಂತರರಾದ ಜಿ.ಎಸ್.ಅನಿಲ್ ರಾಜ್ ಅವರು ತಿಳಿಸಿದ್ದಾರೆ.
ರೈತರು ಈ ವೃತ್ತದಡಿಯ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲದ ಗೇಟುಗಳಿಗೆ ಹಾನಿ ಮಾಡುವುದು, ಎಸ್ಕೇಪ್‌ಗಳ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಫನ್‌ಗಳ ಮೂಲಕ ಮಣ್ಣಿನ ಎರಿಯಲ್ಲಿ ನೀರನ್ನು ಎತ್ತಿಕೊಳ್ಳುವುದು, ಕಾಲುವೆ ಜಾಲದಲ್ಲಿ ಪಂಪ್‌ಗಳ ಮೂಲಕ ನೀರನ್ನು ಎತ್ತುವುದನ್ನು ಮಾಡದಂತೆ ನಿರ್ಬಂಧಿಸಲಾಗಿದೆ.
ರೈತರು ಈ ರೀತಿ ಅನಧೀಕೃತವಾಗಿ ನೀರು ಹರಿಸಿಕೊಂಡರೆ ಸಂಬAಧಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅಚ್ಚುಕಟ್ಟು ಕ್ಷೇತ್ರದ ರೈತಬಾಂದವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಅವಕಾಶ ಮಾಡಿದ್ದು, ನೀರಾವರಿ ಆಶ್ರಿತ ಬೆಳೆಗಳಾದ ಕಬ್ಬು, ಬಾಳೆ ಹಾಗೂ ಭತ್ತ ಬೆಳೆಗಳನ್ನು ನೀರಾವರಿ ಆಶ್ರಯದಲ್ಲಿ ಬೆಳೆಯುವುದನ್ನು ನಿಷೇಧಿಸಲಾಗಿದೆ.
ಆದ್ದರಿಂದ ರೈತಬಾಂದವರು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಹಾಗೂ ಈ ದಿಶೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕಾರ ನೀಡಲು ಕೋರಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ನಾರಾಯಣಪುರ ಬಲ ದಂಡೆ ಕಾಲುವೆ ವೃತ್ತಸಂಖ್ಯೆ;02ರ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
