ಸಿಂಧನೂರು : ಡಿ 26 ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಫ್ ಸೆಂಟರ್ ನಲ್ಲಿ ಸುಮಾರು ದಿನಗಳಿಂದ ಆಶ್ರಯ ಪಡೆದಿದ್ದ ವಯಸ್ಕರ ಬುದ್ಧಿಮಾಂದ್ಯಳಾದ ಶಶಿಕಲಾ ವಯಸ್ಸು-32 ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಖಿ ಒನ್ ಸ್ಟಾಪ್ ಸೆಂಟರ್ ನ ಆಡಳಿತಾಧಿಕಾರಿಗಳಾದ ಭಾಗ್ಯವತಿ ಇವರುಗಳ ಕೋರಿಕೆಯ ಮೇರೆಗೆ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಕರೆತಂದು ಆಶ್ರಯ ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಮಾತನಾಡಿ ವಯಸ್ಕರ ಬುದ್ಧಿಮಾಂದ್ಯಳಾದ ಶಶಿಕಲಾ ಇವರಿಗೆ ಕನ್ನಡ ಮಾತನಾಡಲು ಬರುತ್ತಿಲ್ಲ. ಮೂಲತ ಇವರ ವಿಳಾಸವನ್ನು ತಿಳಿಸುತ್ತಿಲ್ಲ ಇವರ ಘೋರವಾದ ಸ್ಥಿತಿಯನ್ನು ಅರಿತುಕೊಂಡು ನಾವು ಮಾನವೀಯತೆಯ ದೃಷ್ಟಿಯಿಂದ ಇಲಾಖೆಯ ಒಪ್ಪಿಗೆ ಮೇರೆಗೆ ಈ ಸಹೋದರಿಗೆ ತಾತ್ಕಾಲಿಕ ಆಶ್ರಯ ನೀಡುತ್ತಿದ್ದೇವೆ. ಇಂತಹ ಅದೆಷ್ಟೋ ಹೆಣ್ಣು ಮಕ್ಕಳನ್ನು ತಾಯಂದಿರನ್ನು ಕಾಪಾಡುವ ಕಾರ್ಯಕ್ಕೆ ಕಾರಣರಾದ ದಾನಿಗಳೇ ನಮ್ಮ ನಡೆದಾಡುವ ದೇವರುಗಳು. ಸುಮಾರು ಇಷ್ಟು ವರ್ಷಗಳ ಕಾಲ ಸರ್ಕಾರ ನಮ್ಮ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಮತ್ತು ವಿಶೇಷವಾಗಿ ಸಿಂಧನೂರಿನ ಜನಪ್ರತಿನಿಧಿಗಳು ವಾಸ್ತವ ಸ್ಥಿತಿಯನ್ನು ನೋಡುತ್ತಿದ್ದರು ಸಹ ನಮಗೆ ಸ್ವಂತ ಜಾಗ ಮತ್ತು ಅನುದಾನ ಕೊಡಿಸದಿರುವುದು. ಇನ್ನೂ ಹೆಚ್ಚಿನ ಸೇವೆ ಮಾಡಲು ಸ್ಪೂರ್ತಿಯಾಗಿದೆ. ಕಷ್ಟದಲ್ಲಿರುವವರನ್ನು ಕಾಪಾಡುವುದು ಅನಾಥ ಜೀವಿಗಳಿಗೆ ಬದುಕು ಕಟ್ಟಿಕೊಡುವುದು ಅವರೆಲ್ಲಾ ನೋವುಗಳನ್ನು ಮರೆಸಿ ಇರುವಷ್ಟು ದಿನ ಅವರನ್ನು ತಂದೆ-ತಾಯಿಗಳು ಸಹೋದರ ಸಹೋದರಿಯರು ಎನ್ನುವ ಭಾವನೆಯನ್ನಿಟ್ಟುಕೊಂಡು ಸೇವೆ ಮಾಡುವ ಕಾರ್ಯಗಳೆ ನಮ್ಮ ಸಂಸ್ಥೆಯ ಮೂಲ ಉದ್ದೇಶಗಳಾಗಿವೆ. ಮತ್ತು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿಯೂ ಸಹ ನಾವು ನಮ್ಮ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಲ್ಲಿ ಹಲವಾರು ಜಾಗೃತಿಗಳನ್ನು ಮಾಡುವ ಮೂಲಕ ವೃದ್ಧಾಶ್ರಮಗಳ ಸ್ಥಿತಿಗತಿಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಎಲ್ಲಾ ಕಾರ್ಯಗಳಿಗೆ ದಾನಿಗಳೇ ಮೂಲ ಕಾರಣಿಕರ್ತರು ಎಂದು ಮಾತನಾಡಿ ರಿಮ್ಸ್ ಮೆಡಿಕಲ್ ಕಾಲೇಜಿನ ಸಖಿ ಒನ್ ಸ್ಟಾಪ್ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಮಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಿಮ್ಸ್ ಮೆಡಿಕಲ್ ಕಾಲೇಜಿನ ಸಖಿ ಒನ್ ಸ್ಟಾಪ್ ಸೆಂಟರ್ ನ ಆಡಳಿತಾಧಿಕಾರಿಗಳಾದ ಭಾಗ್ಯವತಿ ಆಪ್ತ ಸಮಾಲೋಚಕರಾದ ಸುಮಲತಾ. ಮತ್ತು ಆಶ್ರಮದ ಸಿಬ್ಬಂದಿಗಳಾದ ಬಸವ ಸ್ವಾಮಿ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *