ರಾಯಚೂರು: ‘ಜಿಲ್ಲೆಯಲ್ಲಿ ಕೆರೆ-ಕಟ್ಟೆಗಳ ಸಂರಕ್ಷಣೆ ಮೂಲಕ ಅಂತರ್ಜಲ ವೃದ್ಧಿಗಾಗಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ನಗರದ ನೀರಭಾವಿಕುಂಟೆ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನಗರದ ಕೇಂದ್ರ ಭಾಗದಲ್ಲಿರುವ ಮಾವಿನಕೆರೆಯನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ನೀರಭಾವಿ ಕುಂಟೆ ಕೆರೆಯನ್ನು ₹ 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಸಾರ್ವಜನಿಕರು ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಬೇಕು ಹಂತ ಹಂತವಾಗಿ ನಮ್ಮ ಸರ್ಕಾರ ಜನಪರವಾದ ಅಭಿವೃದ್ಧಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ರೂಪಿಸಲಾಗುವುದು. ಕೆರೆ ಭಾಗವನ್ನು ಒತ್ತುವರಿಯಾಗದಂತೆ ಅಧಿಕಾರಿಗಳು ಕೆರೆಯ ಸುತ್ತಲೂ ಗಡಿಭಾಗವನ್ನು ಭದ್ರಗೊಳಿಸಬೇಕು’ ಎಂದು ತಿಳಿಸಿದರು‌.

ಸಂಸದರಾದ ಜಿ ಕುಮಾರ ನಾಯಕ, ಮಾಜಿ ಶಾಸಕ ಎ. ಪಾಪರಡ್ಡಿ, ಕಾಂಗ್ರೆಸ್ ಮುಖಂಡ ಮೊಹ್ಮದ್ ಶಾಲಂ, ಕೆ ಶಾಂತಪ್ಪ, ಜಯಣ್ಣ, ಜಯವಂತ ರಾವ್ ಪತಂಗೆ, ಶ್ರೀನಿವಾಸ ರಡ್ಡಿ, ಶೇಖರ ರಡ್ಡಿ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಮುನಿಸ್ವಾಮಿ, ಸುಭಾಷ್, ವಿಶಾಲ ರಡ್ಡಿ, ಸೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *