ಲಿಂಗಸಗೂರು : ಡಿ 23 ಕೃಷಿ ಇಲಾಖೆ ಸ್ಥಾಳಂತರ ವಿರೋಧಿಸಿ ನಡೆಸುತ್ತಿರುವ ಹೋರಾಟವು ಇಂದಿಗೆ 29 ನೇ ದಿನಕ್ಕೆ ಕಾಲಿಟ್ಟಿದ್ದು ಕೃಷಿ ಇಲಾಖೆ ಸಿಂಧನೂರಿಗೆ ಸ್ಥಳಾಂತರ ರದ್ದುಪಡಿಸಿ ಲಿಂಗಸಗೂರು ನಲ್ಲಿ ಕಾಯಂ ಉಳಿಸಲಾಗುವುದೆಂದು ಭರವಸೆಯನ್ನು ನೀಡಿದ್ದು ಆದೇಶವನ್ನು ಲಿಖಿತ ರೂಪದಲ್ಲಿ ಕೊಡಲೇಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತಾ ನಡೆಸುತ್ತಿರುವ ಹೋರಾಟಕ್ಕೆ ದಿನಾಂಕ 24 ರಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರವರು ಈ ಹೋರಾಟದಲ್ಲಿ ಪಾಲ್ಗೊಳ್ಳಳಿದ್ದು ಲಿಂಗಸಗೂರಿನ ವಿವಿಧ ಸಂಘಟನೆ ಮುಖಂಡರು ಬುಧುವಾರ ದಿ 24 ರಂದು ಕೃಷಿ ಇಲಾಖೆಯ ಆವರಣದಲ್ಲಿ ಭಾಗವಹಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷರು ಶಿವಪುತ್ರ ಗೌಡ ನಂದಿಹಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

