ಸಿಂಧನೂರು: ರಾಜ್ಯ ಸರ್ಕಾರದ ಯೋಜನೆಯ ಕರಾಟೆ ಹೆಣ್ಣುಮಕ್ಕಳು ಕಲಿಯುವುದರಿಂದ ಆತ್ಮರಕ್ಷಣೆ ಸ್ಥೈರ್ಯ ಹೆಚ್ಚಿಸಲು ಕರಾಟೆ ಸಹಕಾರಿಯಾಗಲಿದೆ ಎಂದು ಸರಕಾರಿ ಪ್ರೌಢಶಾಲೆ ವೀರಾಪುರ ಮುಖ್ಯಗುರು ಬಸವರಾಜ ಹುಡೇದ್ ಹೇಳಿದರು.
ಅವರು ತಾಲೂಕಿನ ಸರಕಾರಿ ಪ್ರೌಢಶಾಲೆ ವೀರಾಪುರ ಕರಾಟೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರ 2025-26 ಸ್ವಯಂ ರಕ್ಷಣಾ ಕರಾಟೆ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯ ಯೋಜನೆಯನ್ನು ಕೊಟ್ಟ ಸರ್ಕಾರಕ್ಕೆ ಅಭಿನಂದನೆಗಳು ಕರಾಟೆ ಕಲಿಕೆಯನ್ನು ಕಲಿತ ವಿದ್ಯಾರ್ಥಿನಿಯರು ದಿನಾಲೂ ಮನೆಯಲ್ಲಿ ಕರಾಟೆಯನ್ನು ಅಭ್ಯಾಸ ಮಾಡಬೇಕು ಎಂದರು.
ಸನ್ಮಾನ :ಕರಾಟೆ ತರಬೇತಿ ಶಿಕ್ಷಕ ಖಾಸಿಂಸಾಬ ಕಲೇಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕರಾಟೆ ಶಿಕ್ಷಕ ಖಾಸಿಂಸಾಬ ಕಲೇಗಾರ್ ಮಾತನಾಡಿ ಸರ್ಕಾರ ಕೊಟ್ಟ ಅವಧಿಗಳು ನಮಗೆ ಸಾಕಗಲ್ಲ ಇನ್ನೂ ಅವಧಿಗಳನ್ನು ಹೆಚ್ಚಿಸಿ ಗೌರವಧನ ಕೊಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ ಬಳೂಟಿಗಿ, ಅಮರೇಶ ತಳವಾರ, ಬಸವರಾಜ, ಶಿವಕುಮಾರ ಉದ್ಯಾಳ, ಗೀತಾ ಬಿಳಿಗುಡ್ಡ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

