ಮಾನ್ವಿ: ತಾಲೂಕಿನ ಹಿರೇಕೋಟ್ಮೆಕಲ್ ,ಭೋಗವಾತಿ ಅವಳಿ ಗ್ರಾಮದಲ್ಲಿನ ರಾಮಕ್ಕಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ ಗ್ರಾಮದ ಆರಾಧ್ಯ ಶಕ್ತಿ ದೇವತೆಯಾಗಿರುವ ರಾಮಕ್ಕಮ್ಮ ದೇವಿಯು ಅನೇಕ ವರ್ಷಗಳಿಂದ ಭಕ್ತರಿಗೆ ಅನುಗ್ರಹವನ್ನು ನೀಡುತ್ತ ಬಂದಿರುವ ಶಕ್ತಿ ದೇವತೆಯ ದೇವಸ್ಥಾನದ ಜಿರ್ಣೋದರಕ್ಕೆ ಗ್ರಾಮದ ಭಕ್ತರು ಮುಂದಾಗಿದ್ದು ನನ್ನಿಂದಾಗುವ ಸಹಕಾರವನ್ನು ನೀಡುವುದಾಗಿ ಬರವಸೇ ನೀಡಿದರು.
ಅಡವಿ ಅಮರೇಶ್ವರ ಮಠದ ಶ್ರೀ ತೊಂಟದಾರ್ಯ ಮಹಾಸ್ವಾಮಿಗಳು ದಿವ್ಯಸಾನಿದ್ಯವನ್ನು ವಹಿಸಿ ಆರ್ಶಿವಾಚನ ನೀಡಿ ಅಧ್ಯಾತ್ಮಿಕ ಪ್ರವಚನವನ್ನು ಅಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದರ ಜೋತೆಗೆ ಮಕ್ಕಳಲ್ಲಿನ ಶರಣರ, ಸಂತರ, ಮಹಾಯೋಗಿಗಳ ಅದರ್ಶ ಜೀವನ ಹಾಗೂ ಅವರ ತತ್ವಗಳ ಬಗ್ಗೆ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀ ರುದ್ರಯ್ಯಶಾಸ್ತಿçಗಳು ರಾಮಕ್ಕಮ್ಮ ದೇವಿ ಕುರಿತು ಅಧ್ಯಾತ್ಮಿಕ ಪ್ರವಚನ ನೀಡಿದರು. ಸಂಜೆ ಕಾರ್ತಿಕ ದೀಪೋತ್ಸವ ನಡೆಯಿತು.
ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷರಾದ ವೀರಭದ್ರಗೌಡ ಭೋಗವತಿ, ಮುಖಂಡರಾದ ತಿಮ್ಮರೆಡ್ಡಿ ಭೋಗವತಿ, ಅ.ಭಾ.ವೀ.ಲಿಂ.ಮಹಾಸಭಾ ತಾಲೂಕು ಅಧ್ಯಕ್ಷರಾದ ಅರುಣಚಂದಾ , ಜಗದೀಶ ಒತ್ತೂರು, ಉಮೇಶ ಸಜ್ಜನ, ಶಂಭನಗೌಡ,ವಿಜಯಕುಮಾರ ಮೇಟಿ,ಚನ್ನಬಸವ ಸುಗನೂರು ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *