ಕಾಂಗ್ರೆಸ್ ಪಕ್ಷ ಎನ್ನಾರ್ಬಿಸಿ 5ಎ ಯೋಜನೆಗೆ ಶೀಘ್ರದಲ್ಲಿ ಟೆಂಡರ್ ಕರೆದು ರೈತರಿಗೆ ಕೊಟ್ಟ ಗ್ಯಾರಂಟಿಯಂತೆ ನಡೆದುಕೊಳ್ಳಲಿದೆ – ಶಾಸಕ ಬಸನಗೌಡ ತುರವಿಹಾಳ
ಮಸ್ಕಿ: ರೈತರ ಬಹು ದಿನಗಳ ಬೇಡಿಕೆಯಾಗಿರುವ ಎನ್ನಾರ್ಬಿಸಿ 5ಎ ಪಾಮನಕೆಲ್ಲೂರು ಶಾಖ ಕಾಲುವೆ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟದಲ್ಲಿ 990 ಕೋಟಿಗೆ ಅನುಮೋದನೆ ದೊರೆತಿದ್ದು ಟೆಂಡರ್ ಕರೆಯುವ ಹಂತದಲ್ಲಿದೆ ಎಂದು ಖಾದಿ ಮತ್ತು ಗ್ರಾಮದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಹೇಳಿದರು.
ಮಸ್ಕಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶಾಸಕರ ಕಾರ್ಯಾಲದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕಿ ಕ್ಷೇತ್ರದಲ್ಲಿ ಈ ಹಿಂದೆ ಅಧಿಕಾರ ನಡೆಸಿದವರು ರೈತರ ಪರ ಕಾಳಜಿ ವಹಿಸದೆ ನಿರ್ಲಕ್ಷ ಮಾಡಿದ್ದರಿಂದ ನಿಮ್ಮನ್ನು ಕ್ಷೆತ್ರದ ಜನರು ವಿರೋಧ ಪಕ್ಷದಲ್ಲಿ ಕೂಡಿಸಿದ್ದಾರೆ. ಜನರಿಗೆ ದಾರಿ ತಪ್ಪಿಸುವ ಕೆಲಸ ಬಿಡಬೇಕು ನಾವು ಕ್ಷೆತ್ರದ ಜನತೆಗೆ ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡಿದ್ದೇವೆ. ಕೆಲ ತಾಂತ್ರಿಕ ಸಮಸ್ಯೆಯಿಂದ ನಾಲ್ಕೇದು ತಿಂಗಳು ವಿಳಂಬವಾಗಿತ್ತು ಇದೀಗ ಎಲ್ಲ ಸಮಸ್ಯೆಗಳು ಸರಿಯಾಗಿದೆ ಆದ್ದರಿಂದ ಬೇಗ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ ಎಂದರು.
ಈ ಯೋಜನೆಗಾಗಿ ಎನ್. ಎಸ್. ಬೋಸರಾಜ್, ಅಮರೇಗೌಡ ಭಯ್ಯಾಪುರ ಅವರು ಪ್ರತಿ ವಾರಕ್ಕೊಮ್ಮೆ ಸಂಬಂಧ ಪಟ್ಟ ಇಲಾಖೆ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಭೇಟಿಯಾಗಿ ಪ್ರಯತ್ನ ಮಾದಿದ್ದೇವೆ ಎಂದರು. ಇದೀಗ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶದಲ್ಲಿ ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳಿಗೆ ಸ್ಪಂಧಿಸಿರುವ ಮುಖ್ಯಮಂತ್ರಿಗಳು ಈ ಭಾಗದ ಬಹುದಿನದ ರೈತರ ಭೇಡಿಕೆಯಾದ ಎನ್ನಾರ್ಬಿಸಿ ೫ಎ ಕಾಲುವೆ ಯೋಜನೆ ಚಾಲನೆಗೆ ಅನುಮೋದನೆ ನೀಡಿದ್ದಾರೆ. ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಲಿದೆ ಎಂದರು.
ಉಪ ಚುನಾವಣೆ ಮತ್ತು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 5ಎ ಕಾಲುವೆ ಯೋಜನೆಯನ್ನು ಜಾರಿಗೊಳಿಸುತ್ತೇವೆಂದು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕ್ಷೇತ್ರದ ಜನಕ್ಕೆ ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಇಂದು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿನಡೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ಜಾಗದ ಸಮಸ್ಯೆ ಇತ್ತು ಇದೀಗ ಅದು ಬಗೆಹರಿಯುವ ಅಂತಕ್ಕೆ ಬಂದಿದೆ. ಆರೋಗ್ಯ ಮಂತ್ರಿಗಳ ಜತೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಜಾಗ ವಶಕ್ಕೆ ಪಡೆಯಲಿದೆ. ನಂತರ ಆಸ್ಪತ್ರೆಗೆ ಬೇಕಾದ ಸಕಲ ಸೌಲಭ್ಯಗಳು ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.
ಮಸ್ಕಿ ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಕಲಾಪ ನಡೆಸಲು ಒತ್ತಾಯಿಸಲಾಗಿದ್ದು, ಆರ್ಥಿಕ ಇಲಾಖೆಯಲ್ಲಿ ಪೈನಲ್ ಹಂತಕ್ಕೆ ಇದೆ. ಹೊಸ ಕೋರ್ಟ್ ಕಟ್ಟಡಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ
ಮಾತನಾಡಿ ಉಪ ಚುನಾವಣೆ ಸಂದರ್ಭದಲ್ಲಿ ನಾವು ವಿರೋಧ ಪಕ್ಷದಲ್ಲಿ ಇದ್ದೇವು ಆಗ ಮಾತು ಕೊಟ್ಟಂತೆ ನಾವು ಅಲ್ಲಿಂದ ಚುನಾವಣೆ ಪ್ರಚಾರ ಆರಂಭ ಮಾಡಿದೆವು ಕ್ಷೆತ್ರದ ಅಭಿವೃದ್ಧಿಗೆ ಶಾಸಕರ ಇಚ್ಚಾಶಕ್ತಿ ಇರಬೇಕು ಅದು ನಮ್ಮ ಶಾಸಕರು ಮಾಡಿದ್ದಾರೆ ಎಂದರು.
ಸಿಹಿ ತಿನ್ನಿಸಿ ಸಂಭ್ರಮ : ಮಸ್ಕಿ ವಿಧಾನ ಸಭಾ ಕ್ಷೆತ್ರಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು 5ಎ ನಾಲೆ ಯೋಜನೆ ಅನುಮೋದನೆ ನೀಡಿದ್ದರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಶಾಸಕ ಆರ್. ಬಸನಗೌಡ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ
ಗ್ರಾಮಿಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ನಿರುಪಾದೆಪ್ಪ ವಕೀಲರು ಗುಡಿಹಾಳ, ಅಂದಾನಪ್ಪ ಗುಂಡಳ್ಳಿ, ಮೈಬುಸಾಬ ಮುದ್ದಾಪೂರ, ಪಂಪಾಪತಿ ಗುಡದೂರು, ಬಸನಗೌಡ ಪೊಲೀಸ್ ಪಾಟೀಲ್, ಎಂ. ಅಮರೇಶ ಮಸ್ಕಿ, ನಾಗಭೂಷಣ್, ಮಲ್ಲಯ್ಯ ಮುರಾರಿ, ಕೃಷ್ಣ ಚಿಗರಿ, ಆನಂದ, ನಾಗರಾಜ ಗುಡಿಸಲಿ ಸೇರಿದಂತೆ ಇನ್ನಿತರರಿದ್ದರು.
ಮಸ್ಕಿ ವಿಧಾನಸಭಾ ಕ್ಷೇತ್ರದ 5ಎ ನಾಲೆ ನೀರಾವರಿ ಯೋಜನೆಗೆ ಬೆಳಗಾವಿ ಅಧಿವೇಶನದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, 990 ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ.- ಶಾಸಕ ಆರ್ ಬಸನಗೌಡ ತುರುವಿಹಾಳ.


