ರಾಯಚೂರು ಡಿಸೆಂಬರ್ 19 (ಕರ್ನಾಟಕ ವಾರ್ತೆ): ನಗರದ ಮಾಣಿಕ ನಗರದಲ್ಲಿ ಡಿಸೆಂಬರ್ 22ರ ಬೆಳಿಗ್ಗೆ 10 ಗಂಟೆಗೆ ಉದ್ಯೋಗಕ್ಕಾಗಿ ಸಂದರ್ಶನವು ಆಯೋಜಿಸಲಾಗಿದೆ. ಐ,ಟಿ,ಐ,ಕೋರ್ಸನ ಎಲೆಕ್ಟ್ರಿಶೀಯನ್, ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಫೀಟರ್, ಟರ್ನರ್, ಎಮ್,ಎಮ್,ವಿ, ಎಮ್,ಆರ್,ಎಸಿ, ವೆಲ್ದರ್, ಕೋಪಾ ವೃತ್ತಿಯ ತರಬೇತುದಾರರು ಮತ್ತು ಡಿಪ್ಲೋಮಾ ಹಾಗೂ ಪದವಿಯಲ್ಲಿ ಉತ್ತೀರ್ಣರಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಉದ್ಯೋಗದ ಸಂದರ್ಶನಕ್ಕಾಗಿ ರಾಯಚೂರಿನ ಸಾವಿತ್ರಿ ಗ್ರೂಪ್, ಹೋಂಡಾ ಮೋರ‍್ಸ ಬೆಂಗಳೂರಿನ ಟಾಟಾ ಎಲೆಕ್ಟ್ರಿಕಲ್, ಬಳ್ಳಾರಿಯ ಜೆ,ಎಸ್.ಡಬ್ಲ್ಯು, ಕೋಲಾರದ ಟಾಟಾ ಮೋರ‍್ಸ, ಹೋಂಡಾ ಮೋರ‍್ಸ, ಕಲಬುರಗಿಯ ಅರ್ಥ ಮೂವರ್ಸ, ಬೆಂಗಳೂರಿನ ವಿಸನ್ ಇಂಡಿಯಾ ಲಿಮಿಟೆಡ್, ಹೈದ್ರಾಬಾದ್ ಎಮ್.ಆರ್,ಎಫ್ ಟೈರ್ಸ ಸೇರಿದಂತೆ ಪ್ರತಿಷ್ಟಿತ ಕಂಪನಿಗಳ ಪ್ರತಿನಿಧಿಗಳು ಆಗಮಿಸುತ್ತಿದ್ದು, ಸ್ಥಳದಲ್ಲಿಯೇ ಸಂದರ್ಶನ ನೆಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7760776556, 9590649335, 9035064582ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರಿನ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
