ಮಾನವಿ : ಮಾನವಿ ತಾಲೂಕಿನ ಜೆಡಿಎಸ್ ಪಕ್ಷದ ವತಿಯಿಂದ ಇಂದು ನಗರದಲ್ಲಿ ನಾಡು ಕಂಡ ಅಪರೂಪದ ರಾಜಕಾರಣಿ , ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ H D ಕುಮಾರಸ್ವಾಮಿ ಇವರ ಹುಟ್ಟು ಹಬ್ಬವನ್ನು ಮಾನ್ವಿ ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ , ಅಂಧ ಮಕ್ಕಳ ಶಾಲೆಗೆ, ನೆರಳು ಅನಾಥ ಆಶ್ರಮಕ್ಕೆ ಹಣ್ಣು ಹಂಪಲು ಹಾಗೂ ಆಶ್ರಮಕ್ಕೆ ದವಸ ಧಾನ್ಯ ನೀಡಿ ಕೇಕ್ ಕಟ್ ಮಾಡುವ ಮೂಲಕ ಸನ್ಮಾನ್ಯ ಶ್ರೀ H D ಕುಮಾರಸ್ವಾಮಿ ಇವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ಶ್ರೀ ರಾಜಾ ರಾಮಚಂದ್ರ ನಾಯಕ ದೊರೆ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಈರಣ್ಣ ಮರ್ಲಟ್ಟಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ H ಮೌನೇಶ್ ಗೌಡ, ಜೆಡಿಎಸ್ ರೈತ ಘಟಕದ ಅಧ್ಯಕ್ಷರಾದ ಶರಣಪ್ಪ ಗೌಡ ಮದ್ಲಾಪುರ, ಪುರಸಭೆ ಸದಸ್ಯರಾದ ಬಾಷಾ ಸಾಬ್, ಶರಣಪ್ಪ ಮೇಧಾ,ಜೆಡಿಎಸ್ ಪಕ್ಷದ ST ಘಟಕದ ಅಧ್ಯಕ್ಷರಾದ ವಿಜಯ್ ನಾಯಕ ಕೊಟ್ನೆಕಲ್, ಉಸ್ಮಾನ್ ಸಾಬ್ ಮೌಲಾ ಸಾಬ್, ಲಕ್ಷ್ಮಣ ಯಾದವ್, ವೀರೇಶ್ ಉಪ್ಪಾರ, ಬಸವರಾಜ ಸ್ವಾಮಿ ಖಾಜಾ ಪಾಷಾ ಕವಿತಾಳ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು


