17 ವರ್ಷದ ಒಳಗಿನ ಬಾಲಕಿಯರ 400 ಮೀ ಓಟದ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಕು. ಸುಧಾ , ರಾಯಚೂರು ಜಿಲ್ಲಾ ಮಟ್ಟದ ಬಾಲಕಿಯರ 100 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಕು. ಮಮತಾ.
17 ವರ್ಷದ ಒಳಗಿನ 110 ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಕು.ಅಕ್ಷತಾ,
ಬಾಲಕಿಯರ 4*400 ಓಟದಲ್ಲಿ ದ್ವಿತೀಯ ಸ್ಥಾನ ಪಡೆದ ಸ ಪ್ರೌ ಶಾಲೆ ಆರ್ ಎಚ್ ನಂ 1 ಮತ್ತು ಬಾಲಕಿಯರ 4*100 ದ್ವಿತೀಯ ಸ್ಥಾನ ಪಡೆದ ಸ ಪ್ರೌ ಶಾಲೆ ಆರ್ ಎಚ್ ನಂ 1 ವಿದ್ಯಾರ್ಥಿಗಳಿಗೆ ಆರ್ ಎಚ್ ನಂ 1 ಸ ಪ್ರೌ ಶಾಲೆಯ ಮುಖ್ಯ ಗುರುಗಳು ಶುಭಾಶಯ ಕೋರಿ ಪ್ರಶಂಸೆ ವ್ಯಕ್ತ ಪಡಿಸಿದರು ,
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ನಮ್ಮ ಶಾಲೆಯ ವಿದ್ಯಾರ್ಥಿನಿಯರು ಸಾಧನೆ ಮಾಡಿರುವುದು ನಮ್ಮ ಗ್ರಾಮಕ್ಕೆ ಕೀರ್ತಿ ತಂದಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಹಮತ್ ಪಾಷಾ ನಮ್ಮ ಪ್ರೌಢಶಾಲೆ ವಿದ್ಯಾರ್ಥಿನಿಯರ ಸಾಧನೆ ನಮ್ಮ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕ ಮತ್ತು ರಾಜ್ಯಮಟ್ಟದಲ್ಲಿ ಜಯಗಳಿಸಿ ನಮ್ಮ ಗ್ರಾಮದ ಕೀರ್ತಿ ಪಟಾಕೆ ಹರಿಸಲೆಂದೇ ಶುಭಕೋರಿದರು ಮತ್ತು ಆರ್ ಎಚ್ ನಂ 1 ಗ್ರಾಮಸ್ಥರು ಮತ್ತು ಕ್ರೀಡಾಭಿಮಾನಿಗಳು ಶುಭಾಶಯ ಕೋರಿದರು
