ಮಾನ್ವಿ: ತಾಲೂಕಿನ ತಮ್ಮಾಪುರ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಾನ್ವಿಯ ಕಲ್ಮಠ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಗುಂಡಪ್ಪ ತಮ್ಮಾಪುರ ವಿಶೇಷ ಉಪನ್ಯಾಸ ನೀಡಿ ಯುವಕರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಸಮಯವನ್ನು ಸದುಪಯೋಗ ಪಡಿಸಿಕೊಂಡಲ್ಲಿ ಜೀವನದಲ್ಲಿ ಉನ್ನತ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ ಯುವ ಸಮುದಾಯ ನಮ್ಮ ದೇಶದ ಸ್ವಾತಂತ್ರö್ಯ ಹೋರಾಟಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ ದೇಶ ಭಕ್ತರಾದ ಭಗತ್ ಸಿಂಗ್, ರಾಜಗುರು,ಸುಖದೇವ್ ರಂತಹವರನ್ನು ತಮ್ಮ ಅದರ್ಶವಾಗಿಸಿಕೊಳ್ಳ ಬೇಕು ಹಾಗೂ ಸಮಾಜದಲ್ಲಿ ಅಗತ್ಯವಿರುವವರಿಗೆ ಸಹಾಯವನ್ನು ಮಾಡುವ ಮೂಲಕ ಅದರ್ಶ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.
ಕಲ್ಮಠ ಕಾಲೇಜಿನ ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ್ ಮಾತನಾಡಿ ಗ್ರಾಮಸ್ಥಾರ ಸಹಾಕರದಿಂದ ಎನ್.ಎಸ್.ಎಸ್.ಶಿಬಿರ ಯಶಸ್ವಿಯಾಗುವುದಕ್ಕೆ ಸಾಧ್ಯವಾಗಿದೆ ಶಿಬಿರದ ಅನುಭವಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಶ್ರೀ ರೇಣುಕಾ ಎಲ್ಲಮ್ಮ ದೇವಿ ಶಕ್ತಿ ಪೀಠದ ಶ್ರೀ ಕುಬೇರಪ್ಪ ಸ್ವಾಮಿಗಳು , ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ನರಸಣ್ಣ ,ಶಾಲೆಯ ಮುಖ್ಯಗುರುಗಳಾದ ಹಂಪಣ್ಣ, ಸಹ ಶಿಕ್ಷಕರಾದ ತಿಮ್ಮಪ್ಪ ,ಮುಖಂಡರಾದ ಉರುಕುಂದಪ್ಪ ತಮ್ಮಾಪುರ, ಗ್ರಾ.ಪಂ. ಸದಸ್ಯರಾದ ಲಕ್ಷ್ಮಿ ರಾಘವೇಂದ್ರ, ಕಲ್ಮಠ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಬಂಗಾರಪ್ಪ, ತಿಮ್ಮಯ್ಯ, ಉಪನ್ಯಾಸಕರಾದ ಮಾರ್ಟಿನ್, ಗೌರಿ, ಸಿದ್ದಪ್ಪ ಸೇರಿದಂತೆ ಇನ್ನಿತರರು ಇದ್ದರು.
15-ಮಾನ್ವಿ-3:
ಮಾನ್ವಿ: ತಾಲೂಕಿನ ತಮ್ಮಾಪುರ ಗ್ರಾಮದಲ್ಲಿ ಕಲ್ಮಠ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗುಂಡಪ್ಪ ತಮ್ಮಾಪುರ ಉಪನ್ಯಾಸ ನೀಡಿದರು.

Leave a Reply

Your email address will not be published. Required fields are marked *