ರಾಯಚೂರು ಡಿಸೆಂಬರ್ 15 (ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ತಾಲ್ಲೂಕಿನ ಜೆಸ್ಕಾಂ ಉಪ ವಿಭಾಗಗಳಲ್ಲಿ ಗ್ರಾಹಕರ ಕುಂದುಕೊರೆತೆ ತ್ರೈಮಾಸಿಕ ಸಭೆಯನ್ನು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರ ಅಧ್ಯಕ್ಷತೆಯಲ್ಲಿ ವಿವಿಧ ದಿನಾಂಕಗಳಂದು ಹಮ್ಮಿಕೊಳ್ಳಲಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ಡಿಸೆಂಬರ್ 22ರ ಬೆಳಿಗ್ಗೆ 10ಗಂಟೆಗೆ ರಾಯಚೂರು ನಗರ ಉಪ ವಿಭಾಗ-1 ಹಾಗೂ ಮಧ್ಯಾಹ್ನ 3ಗಂಟೆಗೆ ಉಪ ವಿಭಾಗ-2, ಡಿಸೆಂಬರ್ 29ರ ಬೆಳಿಗ್ಗೆ 10ಗಂಟೆಗೆ ದೇವದುರ್ಗ ಹಾಗೂ ಮಧ್ಯಾಹ್ನ 3ಗಂಟೆಗೆ ಸಿರವಾರ, ಡಿಸೆಂಬರ್ 30ರ ಬೆಳಿಗ್ಗೆ 10ಗಂಟೆಗೆ ಲಿಂಗಸುಗೂರು ಹಾಗೂ ಮಧ್ಯಾಹ್ನ 3ಗಂಟೆಗೆ ಮಸ್ಕಿಯಲ್ಲಿ ನಡೆಯುವ ಗ್ರಾಹಕರ ಕುಂದುಕೊರತೆ ತ್ರೈಮಾಸಿಕ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *