ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸಂಘಟನೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸಿ- ಬಸವರಾಜ

ಮಸ್ಕಿ : ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಸಂಘಟನೆ ವತಿಯಿಂದ ತಾಲೂಕ ಮಟ್ಟದ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ತಾಲೂಕು ಪ್ರಧಾನ ಸಂಚಾಲಕ ಬಸವರಾಜ್ ಕೊಠಾರಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಮ್ಮ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಂಘಟನೆಯನ್ನು ಗಟ್ಟಿಗೊಳಿಸಲು ತಾಲೂಕಿನಲ್ಲಿ ಹೆಚ್ಚು ಹೆಚ್ಚು ಜನರು ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಿದರು ಅದೇ ರೀತಿಯಾಗಿ ಮುಂದಿನ ದಿನಮಾನಗಳಲ್ಲಿ ಮಸ್ಕಿ ತಾಲೂಕಿನಲ್ಲಿ ಮಹಿಳೆಯರು ಯುವಕರು ಸದಸ್ಯತ್ವ ನೊಂದಣಿ ಮಾಡಿಕೊಳ್ಳಲು ಮುಂದೆ ಬರಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಸ್ಕಿ ತಾಲೂಕಿನ ಮಹಿಳಾ ಪ್ರಧಾನ ತಾಲೂಕ ಸಂಘಟನೆ ಪ್ರಧಾನ ಸಂಚಾಲಕರಾಗಿ ಸುಮಿತ್ರ ಸಾಗರ ಕ್ಯಾಂಪ್ ಇವರನ್ನು ಆಯ್ಕೆ ಮಾಡಲಾಯಿತು ಮಹಿಳೆಯರು ಹೆಚ್ಚು ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕೆಂದು ತಿಳಿಸಲಾಯಿತು ಕಾರ್ಯಕ್ರಮದಲ್ಲಿ ಕಲ್ಬುರ್ಗಿ ವಿಭಾಗಿ ಸಂಚಾಲಕರಾದ ಚನ್ನಪ್ಪ ಹೆಡಿಗಿಬಾಳ, ನಾಗಪ್ಪ ದಿನಸಮುದ್ರ, ಪರಶುರಾಮ್ ಹುಸ್ಕಿಹಾಳ್, ಹುಲಿಗೇಶ್ ಮುರಾರಿ, ಚಂದಪ್ಪ ಹಾಲಾಪುರ್, ಅರುಣ್ ಕುಮಾರ್ ಸಾಗರ್ ಕ್ಯಾಂಪ್, ಸೋಮಣ್ಣ ಮೇಟಿ, ರಾಮಣ್ಣ ಮಸ್ಕಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *