ಭಾರತದ ವೈವಿಧ್ಯತೆಗೆ ಅನುಗುಣವಾಗಿ ನಡೆಯುವ ಅನೇಕ ಹಬ್ಬಗಳು, ಪ್ರಾದೇಶಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಇದರ ಜೊತೆಯಲ್ಲಿ ನಾಡಿನ ಹಬ್ಬ ಹರಿದಿನಗಳು. ಜಾತ್ರೆಗಳು. ಗಣರಾಜ್ಯೋತ್ಸವ.ಸ್ವಾತಂತ್ರ್ಯ ದಿನಾಚರಣೆ. ಗಾಂಧಿ ಜಯಂತಿ-ಕ್ರಿಸ್‌ಮಸ್. ಸರ್ಕಾರಿ ರಜೆ ದಿನಗಳು. ದಾರ್ಶನಿಕರ ಜಯಂತಿಗಳು. ಇವುಗಳು ದಿನಾಂಕಗಳನ್ನು ಮೊದಲೇ ನಿಗದಿಪಡಿಸಿರುವುದರಿಂದ, ನೀವು ದೀರ್ಘ ವಾರಾಂತ್ಯಗಳು ಅಥವಾ ಹಬ್ಬದ ರಜಾದಿನಗಳಲ್ಲಿ ರಜೆಗಳು, ಪ್ರವಾಸಗಳು ಅಥವಾ ಕುಟುಂಬ ಕಾರ್ಯಕ್ರಮಗಳನ್ನು ಯೋಜಿಸಬಹುದಾಗಿದೆ. ಮುಂಜಾಗೃತೆ ಪಡೆಯಲು ಮತ್ತು ತಿಳಿಯಲು ಕ್ಯಾಲೆಂಡರ್ ಮತ್ತು ಪಂಚಾಗಗಳು ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯವಶ್ಯವಾಗಿವೆ. 2026 ನೂತನ ಹೊಸ ವರ್ಷ ಸರ್ವರಿಗೂ ಸುಖ ಶಾಂತಿ ಸಮೃದ್ಧಿ ತರಲಿ ಎಂದು ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಹಿರೇಮಠರು. ಸಿಂಧನೂರು ನಗರದ ಬಸವ ಸರ್ಕಲ್ ಹತ್ತಿರವಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಸೌಹಾರ್ದ ಸಹಕಾರಿಯ 2026 ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಅಧ್ಯಕ್ಷ ಎಸ್ ಎಸ್ ಹಿರೇಮಠ, ಉಪಾಧ್ಯಕ್ಷ. ಬಸವರಾಜ ಸಣ್ಣಜಿನ್. ಸದಸ್ಯರಾದ ಸಯ್ಯದ್ ಖಲೀಲ್ ಅಹ್ಮದ್. ಆನಂದ ಹಿರೇಮಠ. ಲಿಂಗರಾಜ ಕರಡಕಲ್ಲ. ಶ್ರೀ ಮತಿ ಸಹನಾ ಹಿರೇಮಠ. ಶ್ರೀ ಮತಿ ಕವಿತಾ ಹಿರೇಮಠ. ಮ್ಯಾನೇಜರ್ ಲಿಂಗನಗೌಡ. ಸಿಬ್ಬಂದಿ ಅಕ್ಷಯ ಕುಮಾರ ಕುಲಕರ್ಣಿ. ಶೇಖರಪ್ಪ ಬಾಲಿ ಮತ್ತಿತರರು ಇದ್ದರು.

