ಕವಿತಾಳ:
ನದಿ ಮಾಲಿನ್ಯ ತಡೆದು ಭವಿಷ್ಯದ ಪೀಳಿಗೆಗೆ ಶುದ್ಧ ಜಲ ಸಂಪತ್ತು ಉಳೀಸುವ ಉದ್ದೇಶದಿಂದ ಜಲ,ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಉದಯಕುಮಾರ ಸಾಹುಕಾರ್ ಹೇಳಿದರು. ನವದೆಹಲಿಯ ರಾಷ್ಟಿಯ ಸ್ವಾಭಿಮಾನ ಆದೋಲನ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಹಾಗೂ ಶಿವಮೊಗ್ಗದ ಮರ್ಯಾವರಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಜನ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರೀಕರು ಹಾಗೂ ಯುವಜನ ಉತ್ಸಾಹ ಮತ್ತು ಸಕ್ರಿಯತೆಯಿಂದ ಪಾದಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ,ಕೇವಲ ತುಂಗಭದ್ರಾ ಉಳಿಸಲು ಮಾತ್ರ ಸೀಮಿತವಾಗದೆ ಜಲಮೂಲದ ರಕ್ಷಣೆಗೆ ಮತ್ತು ನೀರಿನ ಮಿತ ಬಳಕೆಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.ಎಂದರು. ಸಮಿತಿಯ ನಾಗೇಶ್ವರ ನಾಯಕ, ಸ್ಥಳಿಯ ಮುಖಂಡರಾದ ಓವಣ್ಣ, ಶರಣಬಸವ ಹಣಗಿ, ರಾಜೆಶ ಬನ್ನಿಗಿಡ,ನೀಲಕಂಠ, ಸಂತೋಷ್ ಕಲ್‌ಶೆಟ್ಟಿ,ಯಾಕೂಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

