ಸಿಂಧನೂರು : ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಬಪ್ಪುರು ರಸ್ತೆ, ಸಿಂಧನೂರು-
ಶ್ರೀಮಾತೆ ಶಾರದಾದೇವಿಯವರ ಜಯಂತಿ & ಆಶ್ರಮದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ.
ಆಶ್ರಮದಲ್ಲಿ ನಡೆದ ಶ್ರೀಮಾತೆ ಶಾರದಾದೇವಿಯವರ 173 ನೇ ಜಯಂತಿ & ಆಶ್ರಮದ 5 ನೇ ವಾರ್ಷಿಕೋತ್ಸವದ ಸಂಜೆಯ ವೇದಿಕೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು..*
ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಶ್ರೀ ಚಂದ್ರಶೇಖರ ಮೈಲಾರ, ನಗರಸಭೆ ಸದಸ್ಯರು ಸಿಂಧನೂರು ಇವರು ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಶಾರದಾ ಮಾತೆಯವರ ಕುರಿತು ಮಾತನಾಡಿದರು…..*
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಹೇಮಲತಾ ಜೋಳದರಾಶಿ, ವಕೀಲರು ಸಿಂಧನೂರು ಇವರು ಆಶ್ರಮದ 5ನೇ ವಾರ್ಷಿಕೋತ್ಸವದ ಸಾರ್ಥಕ ಸೇವೆಯ ಕುರಿತು ಮಾತನಾಡಿದರು..
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಕಲ್ಯಾಣ ಮಂಡಲ, ಶ್ರೀ ರಾಮಕೃಷ್ಣ ಪಳ್ಳಿ ಸಿಂಧನೂರು ಇವರು ಶ್ರೀಮಾತೆ ಶರದಾದೇವಿಯವರ ಜೀವನ ವಿಷಯದ ಕುರಿತು ಬೆಂಗಾಳಿಯಲ್ಲಿ ಉಪನ್ಯಾಸ ನೀಡಿದರು…*
ಕಾರ್ಯಕ್ರಮದ ಮತ್ತೊರ್ವ ಉಪನ್ಯಾಸಕರಾದ ಶ್ರೀಮತಿ ಅಶ್ವಿನಿ ಹಿರೇಮಠ, ಶಿಕ್ಷಕರು, ಕೇಂದ್ರೀಯ ವಿದ್ಯಾಲಯ ಸಿಂಧನೂರು ಇವರು ಶ್ರೀಮಾತೆ ಶಾರದಾದೇವಿಯವರ ಜೀವನದ ಘಟನಾವಳಿಗಳ ಕುರಿತು ಉಪನ್ಯಾಸ ನೀಡಿದರು..
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀಮತಿ ನೀಲಮ್ಮ ಸಂಗಮೇಶ ಅಲಬನೂರ ಇವರು ಶ್ರೀಮಾತೆಯವರ ಸಂದೇಶ ವಿಷಯದ ಕುರಿತು ಹಿಂದಿ & ಕನ್ನಡದಲ್ಲಿ ಉಪನ್ಯಾಸ ನೀಡಿದರು.*
ಕಾರ್ಯಕ್ರಮದ ದಿವ್ಯ ಸಾನಿಧ್ಯ & ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್ ರವರು ಶ್ರೀ ಮಾತೆ ಶಾರದಾದೇವಿಯವರ ಸಂದೇಶಗಳ ಕುರಿತು ಮಾತನಾಡಿದರು..
ಆಶ್ರಮದ 5 ವರ್ಷಗಳ ಸಾರ್ಥಕ ಸೇವೆಯ ಕುರಿತು ಎಲ್ಲರೂ ಹರ್ಷ ವ್ಯಕ್ತಪಡಿಸಿದರು…

