ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಯಾವ ರೀತಿಯಲ್ಲಿ ಆಗಿದ್ದರೂ, ಮಗುವಿನ ತೂಕ ಹೇಗಿದ್ದರೂ, ಪ್ರತಿ ನವಜಾತ ಶಿಶುವಿಗೆ ಹುಟ್ಟಿದ ತಕ್ಷಣ ಮತ್ತು ಮೊದಲು 28 ದಿನಗಳವರೆಗೆ ಕೆಲವು ಅಗತ್ಯ ಆರೈಕೆಗಳ ಅಗತ್ಯ ಇರುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಗೀತಾ ಹಿರೇಮಠ ಹೇಳಿದರು.
ನಗರದ ಇಂದಿರಾ ನಗರದ 3ನೇ ಅಂಗನವಾಡಿ ಕೇಂದ್ರದಲ್ಲಿ ಬಾಲ ವಿಕಾಸ ಸಮಿತಿ ಹಾಗೂ ಮಕ್ಕಳು ಮತ್ತು ತಾಯಂದಿರ ಸಭೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡು ನವಜಾತ ಶಿಶು ಆರೈಕೆ ಬಗ್ಗೆ ತಾಯಂದಿರಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದು ಬಹಳ ಮುಖ್ಯ ಯಾಕೆಂದರೆ ಒಂದು ವರ್ಷದಲ್ಲಿ ಸಾಯುತ್ತಿರುವ ಪ್ರತಿ 10 ಮಕ್ಕಳಲ್ಲಿ ಐದು ಮಕ್ಕಳು ಮೊದಲು 28 ದಿನ ತುಂಬುವುದರೊಳಗೆ ನವಜಾತ ಶಿಶುಗಳು ಸಾಯುತ್ತಿದ್ದಾರೆ. ಶಿಶುವಿನ ಆರೈಕೆಯಲ್ಲಿ ಆಹಾರ, ನಿದ್ರೆ, ಸ್ವಚ್ಛತೆ, ಮಕ್ಕಳ ಬಳ್ಳಿಯ ಆರೈಕೆ ಮತ್ತು ಸ್ನಾನ, ಉಡುಪು, ಲಸಿಕೆಗಳು, ನಿಯಮಿತವಾದ ತಪಾಸಣೆಗಳು ಮತ್ತು ಸುರಕ್ಷಿತ ನಿದ್ರೆ ಅಭ್ಯಾಸಗಳು ಸೇರಿವೆ ಮಗುವಿನ ಚರ್ಮವನ್ನು ತೇವವಾಗಿಡಲು ಮತ್ತು ಬೆಚ್ಚಗಿರಲು ಅಗತ್ಯ ಪರಿಕರಗಳನ್ನು ಒದಗಿಸುವುದು ತಾಯಿಯ ಆರೈಕೆಯಲ್ಲಿ ನವಜಾತ ಶಿಶು ಮತ್ತು ತಾಯಿಯ ಚರ್ಮದಿಂದ ಚರ್ಮದ ಸಂಪರ್ಕವೂ ಸಹ ಮುಖ್ಯವಾಗಿದೆ.
ಪೋಷಕರು ಶಿಶುವಿನ ಅಗತ್ಯಗಳನ್ನು ಗಮನಿಸಬೇಕು ಮತ್ತು ಅಗತ್ಯವಿದ್ದರೆ, ವೈದ್ಯಕೀಯ ಸಲಹೆಗಳನ್ನು ಪಡೆಯಬೇಕು. ತಾಯಿ ಮಗುವಿನ ಬಾಂಧವ್ಯ ಹೆಚ್ಚುವಂತೆ ಮಾಡಬೇಕು ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವಂತೆ ನೋಡಿಕೊಳ್ಳಬೇಕು ತಾಯಿಯನ್ನು ಮಗುವಿನೊಂದಿಗೆ ಏಕಾಂತವಾಗಿರಲು ನೋಡಿಕೊಳ್ಳಬೇಕು. ಎದೆ ಹಾಲಿನ ಮಹತ್ವದ ಬಗ್ಗೆ ತಾಯಿಗೆ ತಿಳಿಸಿ ಎದೆ ಹಾಲನ್ನು ಮಗುವಿಗೆ ಉಣಿಸುವಂತೆ ನೋಡಿಕೊಳ್ಳಬೇಕು. ಮಗು ಎದೆತೊಟ್ಟು ಚೀಪುತ್ತಿದೆಯಾ ಎಂದು ನೋಡಿಕೊಂಡು ಹುಟ್ಟು ತೂಕ ಇರುವಂತ ಮಕ್ಕಳನ್ನು ಸೂಕ್ಷ್ಮವಾಗಿ ಅಗತ್ಯ ಹಾರೈಕೆಗಳು ಮಾಡಬೇಕು ಚಳಿಗಾಲದ ಸಮಯದಲ್ಲಿ ಮಗುವಿನ ಆರೈಕೆಯು ಟೋಪಿ ಕರವಸ್ತ್ರಗಳನ್ನು ಕಟ್ಟುವುದು ಮಗುವನ್ನು ಬೆಚ್ಚಗಿಡುವುದು.
ಯಾವುದೇ ತೊಂದರೆಯಾದರೆ ತಕ್ಷಣವೇ ವೈದ್ಯರನ್ನ ಸಂಪರ್ಕಿಸುವುದು, ಮಗುವಿನ ಮೃದುವಾಗಿ ಬಟ್ಟೆಗಳನ್ನು ತೆಗೆದು ತಾಯಿಯ ಚರ್ಮಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು ನಂತರ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಮಗು ಎದೆ ಚೀಪುವುದು ದುರ್ಬಲವಾಗಿದ್ದರೆ, ಅಥವಾ ಅಸ್ವಸ್ಥವಾಗಿದ್ದರೆ, ಕಡಿಮೆ ತೂಕವಿದ್ದರೆ, ಹೊಟ್ಟೆ ಉಬ್ಬಿದ್ದರೆ, ಮಗು ಹುಟ್ಟಿದ 24 ಗಂಟೆಯೊಳಗೆ ಮಲ ವಿಸರ್ಜನೆ ಮಾಡದೇ ಇದ್ದರೆ, 48 ಗಂಟೆಯೊಳಗೆ ಮೂತ್ರ ವಿಸರ್ಜನೆ ಮಾಡದೇ ಇದ್ದರೆ, ಉಸಿರಾಟದ ತೊಂದರೆಗಳಿದ್ದರೆ, ಮಲ ವಿಸರ್ಜನೆಯಲ್ಲಿ ರಕ್ತವಿದ್ದರೆ, ಕೈ ಕಾಲುಗಳು ಅದರುವುದು, ಮಗುವಿನ ಅಂಗೈ ಹಾಗೂ ಅಂಗಾಲು ನೀಲಿ ಅಥವಾ ಬಿಳಿಚಿಕೊಂಡಿದ್ದರೆ, ಇನ್ನು ಇತ್ಯಾದಿ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಮಗುವನ್ನು ವೈದ್ಯರಿಗೆ ತೋರಿಸಬೇಕು ಎಂದು ಗರ್ಭಿಣಿಯರಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ: ಶಮಿನ ಪಿಎಚ್.ಸಿ.ಒ, ಮೈರುನಿಷಾ, ಭಾನು, ಆಶಾ ಕಾರ್ಯಕರ್ತೆಯರು,
ಜನಾಬಿ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ ತಾಯಂದಿರು, ಕಿಶೋರಿಯರು ಭಾಗವಹಿಸಿದ್ದರು.

