ಬೆಂಗಳೂರು : ಸಾಂಘಿಕ ಆಟವಾಡಿದ ಹಾಕಿ ಬಳ್ಳಾರಿ ತಂಡವು ನಾಮಧಾರಿ ಕಪ್ ಟೂರ್ನಿಯ ಪಂದ್ಯದಲ್ಲಿ ಬುಧವಾರ 11-2ರಿಂದ ಸಾಯ್ ಎಸ್‌ಟಿಸಿ ಎ ತಂಡವನ್ನು ನಿರಾಯಾಸವಾಗಿ ಸೋಲಿಸಿತು.
ಬಳ್ಳಾರಿ ತಂಡದ ರಘುನಾಥ್ ವಿ.ಆರ್. (11ನೇ, 19ನೇ, 44ನೇ ಹಾಗೂ 53ನೇ ನಿ.) ನಾಲ್ಕು ಗೋಲು ಹೊಡೆದು ಮಿಂಚಿದರೆ, ಎಸ್.ವಿ. ಸುನಿಲ್ (4ನೇ ಹಾಗೂ 56ನೇ ನಿ.) ಮತ್ತು ಹಂಪಯ್ಯ (12ನೇ ಹಾಗೂ 34ನೇ ನಿ.) ತಲಾ ಎರಡು ಗೋಲು ಗಳಿಸಿದರು.
ಪ್ರಣಮ್ ಗೌಡ (8ನೇ ನಿ.), ನಾಗಾರ್ಜುನ್ ರೆಡ್ಡಿ (26ನೇ ನಿ.) ಹಾಗೂ ಎಸ್.ಕೆ.ಉತ್ತಪ್ಪ (58ನೇ ನಿ.) ತಲಾ ಒಂದು ಗೋಲು ಹೊಡೆದರು. ಸಾಯ್ ತಂಡದ ನಯೀಮುದ್ದೀನ್ (27ನೇ ಹಾಗೂ 47ನೇ ನಿ.) ಎರಡು ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ತಂಡವು 5-3ರಿಂದ ಡಿವೈಇಎಸ್ ಬಿ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು.

