ಮಸ್ಕಿ : ಇತ್ತೀಚಿನ ದಿನಮಾನಗಳಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಮದುವೆ ಸಮಾರಂಭ ಮಾಡುವುದು ಒಂದು ಸ್ಟೇಟಸ್ ಆಗಿದೆ. ಆದರೆ ಇಲ್ಲಿನ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರು ಯಾವುದೇ ಆಡಂಬರವಿಲ್ಲದೆ ಜನರಿಲ್ಲದೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ತೀರ್ಥಭಾವಿ ಅಮರೇಶ್ವರ ದೇವಸ್ಥಾನದಲ್ಲಿ ಸರಳ ವಿವಾಹವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮಸ್ಕಿ ಪಟ್ಟಣದ ಸಮೀಪವಿರುವ ವೆಂಕಟಪುರ ಗ್ರಾಮದ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ತಮಗೆ ಆಹ್ವಾನ ನೀಡುವ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಪ್ರತಿನಿತ್ಯ ಭಾಗವಹಿಸಿ ಜನರೊಂದಿಗೆ ಬೆರೆಯುವ ಯುವಕರ ನಾಯಕ ರಾಜಕಾರಣದಲ್ಲಿ ಪ್ರತಿಯೊಬ್ಬರ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಶಿವಣ್ಣನಾಯಕ ಅವರು ತಮ್ಮ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಳ್ಳಬೇಕು ಎಂದು ಅವರ ಆತ್ಮೀಯ ಗೆಳೆಯರ ಒತ್ತಾಸೆಯಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಡಂಬರದಿಂದ ಮದುವೆ ಮಾಡಿಕೊಳ್ಳುವುದರಿಂದ ಏನು ಪ್ರಯೋಜನವಿಲ್ಲ ಎಂದು ಯಾರಿಗೂ ಸಹ ಹೇಳದಂತೆ ಮಸ್ಕಿ ವಿಧಾನಸಭಾ ಕ್ಷೆತ್ರ ವ್ಯಾಪ್ತಿಯಲ್ಲಿ ಬರುವ ಸುಪ್ರಸಿದ್ದ ತೀರ್ಥಭಾವಿ ಅಮರೇಶ್ವರ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಬೇಡರ ಕಾರಲಕುಂಟಿ ಗ್ರಾಮದ ಅಶ್ವಿನಿ ಎನ್ನುವರ ಜೊತೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದು ಇದು ಇನ್ನಿತರರಿಗೆ ಮಾದರಿಯಾಗಿದೆ ಎಂದು ಅವರ ಆಪ್ತ ಗೆಳೆಯರು ಹೇಳಿಕೊಂಡಿದ್ದಾರೆ. ಈಗಲಾದರೂ ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ಕುಟುಂಬದವರು ಆಡಂಬರದ ಮದುವೆ ಬಿಡುವುದನ್ನು ಬಿಟ್ಟು ಸರಳವಾಗಿ ಮದುವೆ ಮಾಡಿಕೊಳ್ಳುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕು ಎನ್ನುವುದು ಯುವಕರ ಒತ್ತಾಯ.
ಕೋಟ್ :– ನಾನು ಈಗಾಗಲೇ ಸಕ್ರಿಯ ರಾಜಕಾರಣದಲ್ಲಿ ಇರುವುದರಿಂದ ನನಗೆ ಬಹಳಷ್ಟು ಜನ ಆತ್ಮೀಯರು ಇರುವುದರಿಂದ ನನ್ನ ಮದುವೆಗಾಗಿ ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಬರುವುದು ಬೇಡ ಎನ್ನುವ ಉದ್ದೇಶದಿಂದ ಹಾಗೂ ದುಂಡು ವೆಚ್ಚಕ್ಕೆ ಮಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ಸರಳವಾಗಿ ವಿವಾಹವಾಗಿದ್ದೇನೆ.

– ಶಿವಣ್ಣ ನಾಯಕ್ ವೆಂಕಟಾಪುರ

Leave a Reply

Your email address will not be published. Required fields are marked *