ಮಾನ್ವಿ : ಡಿ 08 ತಾಲೂಕಿನ ಬಲ್ಲಟ್ಟಗಿ ಗ್ರಾಮದ ಶಾಸಕರ ನಿವಾಸದ ಅವರಣದಲ್ಲಿ ಶಾಸಕ ಹಂಪಯ್ಯನಾಯಕ ಕಾರ್ಮಿಕ ಇಲಾಖೆಯಿಂದ ಫಲಾನುಭವಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಟೂಲ್ ಕೀಟ್ ಹಾಗೂ ಸೇಪ್ಟಿ ಕೀಟ್ ಗಳನ್ನು ವಿತರಿಸಿ ಮಾತನಾಡಿ ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆ ಮೂಲಕ ಅಸಂಘಟಿತ ಕಾರ್ಮಿಕರಿಗೆ ದೈನಂದಿನ ಕೇಲಸಗಳಿಗೆ ಅಗತ್ಯವಾದ ಸ್ವಯಂ ಉದ್ಯೋಗವನ್ನು ಮಾಡಿಕೊಳ್ಳುವುದಕ್ಕೆ ಬೇಕಾಗಿರುವ ಅಗತ್ಯ ಸಲಾಕರಣೆಗಳನ್ನು ಹಾಗೂ ಸುರಕ್ಷ ಪರಿಕಾರಗಳ ಕೀಟ್ ಗಳನ್ನು ವಿತರಿಸಲಾಗುತ್ತಿದೆ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಅದಾಯವನ್ನು ಹೊಂದಿ ತಮ್ಮ ಕುಟುಂಬಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಅವರ ಜೀವನವನ್ನು ರೂಪಿಸಿ ಮಾನ್ವಿ ಮತ್ತು ಸಿರವಾರ ತಾಲೂಕುಗಳ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕಾಗಿ ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ಕಾರ್ಮಿಕ ಮಕ್ಕಳ ವಸತಿಯುತ ಶಾಲೆ ಮಂಜೂರು ಮಾಡುವಂತೆ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ರವರಿಗೆ ಕೋರಲಾಗುವುದು ಎಂದು ತಿಳಿಸಿದರು.
ಮಾನ್ವಿ ಮತ್ತು ಸಿರವಾರ ತಾಲೂಕುಗಳ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮಂಜೂರಾದ ಟೂಲ್ ಕೀಟ್ ಹಾಗೂ ಸೇಪ್ಟಿ ಕೀಟ್ ಗಳನ್ನು ಶಾಸಕರು ವಿತರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಮಲ್ಲಪ್ಪ, ಸಿಬ್ಬಂದಿಗಳಾದ ಶರಣಬಸವ,ರುದ್ರಪ್ಪನಾಯಕ, ಕಾರ್ಮಿಕ ಸಂಘಟನೆಯ ಮುಖಂಡರಾದ ಪರಶುರಾಮ್ ಬಾಗಲವಾಡ,ಪಂಪ್ಪಣ್ಣ ಚಾಗಿ, ಸದಾನಂದ,ರಮೇಶ,ಜಫಾರ್,ಅಬ್ರಹಾ,ಮಾರೇಶ,ಉಮೇಶ್,ಮೌನೇಶ, ಸೇರಿದಂತೆ ಮಾನ್ವಿ ಮತ್ತು ಸಿರವಾರ ತಾಲೂಕುಗಳ ಕಾರ್ಮಿಕರು ಭಾಗವಹಿಸಿದರು.
ಮಾನ್ವಿ: ತಾಲೂಕಿನ ಬಲ್ಲಟ್ಟಗಿ ಗ್ರಾಮದ ಶಾಸಕರ ನಿವಾಸದ ಅವರಣದಲ್ಲಿ ಶಾಸಕ ಹಂಪಯ್ಯನಾಯಕ ಕಾರ್ಮಿಕರಿಗೆ ,ಕಾರ್ಮಿಕ ಇಲಾಖೆಯ ಕೀಟ್ ಗಳನ್ನು ವಿತರಿಸಿದರು

