ಬೆಂಗಳೂರು :
ಬೆಟ್ಟ ಹಲಸೂರಿನಲ್ಲಿರುವ ಹಸಿರೇ ಉಸಿರು ಟ್ರಸ್ಟ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾನವೀಯ ಸೇವೆಯನ್ನು ಪ್ರತಿಬಿಂಬಿಸುವ ವಿಶೇಷ ಗೌರವ ವಿತರಣೆ ಕಾರ್ಯಕ್ರಮ ಜರುಗಿತು.
ರಾಯಚೂರು ಜಿಲ್ಲೆಯ ಸಿಂಧನೂರಿನ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಅವರಿಗೆ “ಕರುನಾಡ ಅನಾಥ ರಕ್ಷಕ” ಎಂಬ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿ ವಿಶೇಷವಾಗಿ ಗೌರವಿಸಲಾಯಿತು.
ಅಶಕ್ತರು, ಅನಾಥರು, ವಯಸ್ಕರು ಮತ್ತು ಬುದ್ಧಿಮಾಂದ್ಯರಿಗೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಡಾ. ಹಿರೇಮಠ ಅವರ ಸಂಘಟನೆಯ ಸಾಮಾಜಿಕ ಬದ್ಧತೆ ಹಾಗೂ ಮಾನವೀಯ ಸೇವೆಗೆ ಈ ಗೌರವ ಲಭಿಸಿದೆ. ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು, ಗಣ್ಯರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರತಿಷ್ಠಿತರು ಪಾಲ್ಗೊಂಡು ಅಭಿನಂದಿಸಿದರು.

ಅನಿಸಿಕೆ— ಹಸಿರೇ ಉಸಿರು ಟ್ರಸ್ಟ್ ಸಂಸ್ಥಾಪಕರಾದ ಡಾ. ಶ್ರೀನಿವಾಸ ಮೂರ್ತಿ ಅವರು ಮಾತನಾಡಿ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರಿನ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರು ನಾವು ಮಾಡುತ್ತಿರುವ ಸಮಾಜ ಸೇವೆಗಳಿಗೆ ಸ್ಪೂರ್ತಿ ಮತ್ತು ವಿಶೇಷವಾಗಿ ಅವರಿಗೆ ನಮ್ಮ ವೇದಿಕೆಯಲ್ಲಿ ಕರುನಾಡ ಅನಾಥ ರಕ್ಷಕ ಎನ್ನುವ ಪ್ರಶಸ್ತಿಯೂ ತನ್ನ ಶೋಭೆಯನ್ನು ಹೆಚ್ಚಿಸಿಕೊಂಡಿದೆ. ಕರುನಾಡಿನ ಪ್ರತಿಯೊಂದು ಕರುಣೆಯ ಮನಸ್ಸುಗಳಲ್ಲಿ ಕಾರುಣ್ಯ ಮೂರ್ತಿಗಳಾಗಿ ಮಾಡುತ್ತಿರುವ ಇವರ ಸೇವೆಗೆ ಸದಾವಕಾಲ ಬೆಟ್ಟ ಹಲಸೂರಿನ ಗುರು ಹಿರಿಯರ ನಮ್ಮೆಲ್ಲರ ಸಹಾಯ ಸಹಕಾರವಿರುತ್ತದೆ ಎಂದು ಮಾತನಾಡಿದರು
