ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘ ( ರಿ ) ಬೆಂಗಳೂರು ಹಾಗೂ ರಾಯಚೂರು ಜಿಲ್ಲಾ ನಾಟಕ ಬರಹಗಾರರು ಕವಿಗಳ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಾಂಭದಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ನಾಗರಹಾಳದಲ್ಲಿ ದಿನಾಂಕ 7.12.2025 ರಂದು ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾದ ಗದುಗಿನ ವೀರೇಶ್ವರ ಪುಣ್ಯಶ್ರಮದ ಪರಮಪೂಜ್ಯ ಕಲ್ಲಯ್ಯಜ್ಜನವರ ಮತ್ತು ದಾಸೋಹ ರತ್ನ ಭಾವೈಕ್ಯಬ್ರಹ್ಮ ಸುಕ್ಷೇತ್ರ ಅಂಕಲಿಮಠದ ಶ್ರೀ ಶ್ರೀ ಶ್ರೀ ಬ್ರಹ್ಮ ಶ್ರೀ ವೀರಭದ್ರ ಮಹಾಸ್ವಾಮಿಗಳು ಅವರ ತುಲಾಭಾರ ಕಾರ್ಯಕ್ರಮದಲ್ಲಿ. ಸಿಂದನೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಂಪಯ್ಯಸ್ವಾಮಿ ಸಾಲಿಮಠ ಅವರಿಗೆ ರಾಜ್ಯಮಟ್ಟದ ಅಂಕಲಿಶ್ರೀ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಘಣನೀಯ ಸೇವೆಗೆ ಅಲವಾರು ಸಾಧಕರನ್ನು ಗುರುತಿಸಿ ರಾಜ್ಯಮಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಶ್ರೀ ನಿರುಪಾದಿ ಕವಿಗಳು ನಾಗರಹಾಳ ವಿರಚಿತ ಚೆನ್ನಿಯ ಚಲ್ಲಾಟ ಗೌಡನ ಅರ್ಭಟ. ಶಿವರಡ್ಡಿ ಸಣ್ಣಗೌಡ್ರು ಭೂತಲದಿನ್ನಿ ವಿರಚಿತ. ಪ್ರೀತಿ ಹೋದರು ಸ್ನೇಹ ಬೇಕು.. ದುರಗೇಶ ಬೈಲಗುಡ್ಡ ವಿರಚಿತ ಪ್ರೇಮದ ಹುಚ್ಚು ಸೇಡಿನ ಕಿಚ್ಚು ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಗದುಗಿನ ವೀರೇಶ್ವರ ಪುಣ್ಯಶ್ರಮದ ಪರಮಪೂಜ್ಯ ಕಲ್ಲಯ್ಯಜ್ಜನವರು. ತಿಮ್ಮಾಪುರ ಕಲ್ಯಾಣ ಆಶ್ರಮದ ಪರಮ ಪೂಜ್ಯ ಮಹಾಂತ ಸ್ವಾಮೀಜಿಗಳು. ಹಾಗೂ ಮಾತಾ ಮಾಣಿಕೇಶ್ವರ ಮಠದ ಪರಮಪೂಜ್ಯ ಮಾತೃಶ್ರೀ ನಂಬಿಕೆಶ್ವರ ಅಮ್ಮನವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಾಟಕ ಬರಹಗಾರರ ಸಂಘ ಬೆಂಗಳೂರು, ಸನ್ಮಾನ್ಯ ಶ್ರೀ ಶಂಕರ್ ಹೂವಿನಪ್ಪರಗಿ ವಹಿಸಿದ್ದರು. ಕವಿಗಳು ಸಾಹಿತಿಗಳು ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

