ನವದೆಹಲಿ : ಭಾರತದ ಅತ್ಯಂತ ಹೆಚ್ಚಿನ ಅಲ್ಪಸಂಖ್ಯಾತ ಜನಸಂಖ್ಯೆ (ಸುಮಾರು 96 ಲಕ್ಷ) ಹೊಂದಿರುವ ರಾಜ್ಯವಾಗಿದ್ದರೂ, ಕರ್ನಾಟಕದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ (NMDFC) ನೀಡುವ ಸಾಲ ಕಡಿಮೆಯಾಗಿರುವ ಕುರಿತಾಗಿ ರಾಯಚೂರು ಸಂಸದರಾದ ಕುಮಾರ ನಾಯಕ ರವರು ಸಂಸತ್ತಿನಲ್ಲಿ ಕಳವಳ ವ್ಯಕ್ತಪಡಿಸಿದರು
ಕಳೆದ 30 ವರ್ಷಗಳಲ್ಲಿ, ಕರ್ನಾಟಕಕ್ಕೆ ಕೇವಲ ₹3.73 ಕೋಟಿ ಮೈಕ್ರೋ–ಕ್ರೆಡಿಟ್ ಮತ್ತು ₹134 ಕೋಟಿ ಟರ್ಮ್ ಲೋನ್ಸ್ ಮಾತ್ರ ಲಭ್ಯವಾಗಿದ್ದು, ಇದರ ಪ್ರಯೋಜನ ಕೆವಲ 30,000 ಮಂದಿಗೆ ಮಾತ್ರ ತಲುಪಿದೆ. ಆದರೆ ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಈ ಯೋಜನೆಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿ ನೆರವಾಗಿದೆ.
ಅಲ್ಪಸಂಖ್ಯಾತ ಸಮುದಾಯಗಳ ನಿಜವಾದ ಪ್ರಗತಿಗಾಗಿ, ನಿಧಿ ಹೆಚ್ಚಿಸಬೇಕು, ವ್ಯಾಪಕ ಜಾಗೃತಿ ಮೂಡಿಸಬೇಕು, ಹಾಗೂ ಸಮುದಾಯಗಳಿಗೆ ನೇರವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ನಾನು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ
ಕರ್ನಾಟಕದ ಅಲ್ಪಸಂಖ್ಯಾತರಿಗೆ ನ್ಯಾಯಸಮ್ಮತ ಅವಕಾಶಗಳು ಮತ್ತು ಆರ್ಥಿಕ ಸಬಲೀಕರಣಕ್ಕೆ ಬೇಕಾದ ನೆರವು ಸಿಗಲೇಬೇಕು.

