ಸಿಂಧನೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ತಾಲ್ಲೂಕ ಸಮಿತಿ ಸಿಂಧನೂರ,
ಜೈ ಜವಾನ್ ಜೈಕೀಸಾನ್ ಜನಸೇವಾ ಸಂಘ (ರಿ) ಕರ್ನಾಟಕ
ತಾಲ್ಲೂಕ ಸಮಿತಿ ಸಿಂಧನೂರ,
ವಿಶ್ವರೈತ ದಿನಾಚರಣೆ ಅಂಗವಾಗಿ
ತುಂಗಾಭದ್ರ ರಕ್ಷಣೆ ನಮ್ಮೇಲ್ಲರ ಹೋಣೆ ಕಾರ್ಯಕ್ರಮ
ತುಂಗಾಭದ್ರ ಡ್ಯಾಂ ಉಳಿವಿಗಾಗಿ, ನವಲಿ ಸಮಾಂತರ ಜಲಾಶಯ ಜಾರಿಗಾಗಿ ಮತ್ತು ಬೇಳೆದ ಬೆಳೆಗೆ ವೈಜ್ಞಾನಿಕ ಬೆಲೆ (ಎಂ.ಎಸ್.ಪಿ.) ನಿಗದಿಗಾಗಿ ದಿನಾಂಕ : 23-12-2025 ರಂದು ಎ.ಪಿ.ಎಂ.ಸಿ. ಆವರಣ, ಸಿಂಧನೂರ ರೈತರ ಬೃಹತ್ ಸಮಾವೇಶ
ತುಂಗಾಭದ್ರ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೋಣೆ ಆಗಿರುವುದರಿಂದ ತುಂಗಾಭದ್ರ ಜಲಾಶಯ ದಿನೇ ದಿನೇ ನಮ್ಮ ಕಣ್ಣ ಮುಂದೆಯೇ ಕಣ್ಮರೆ ಆಗುವ ಸ್ಥಿತಿಗೆ ಬರುತ್ತಿದೆ. ಜಲಾಶಯಕ್ಕೆ ಕಾರ್ಖಾನೆಯ ಕೇಮಿಕಲ್, ತ್ಯಾಜ್ಯ ಮತ್ತು ಪ್ರಮುಖ ನಗರಗಳಿಂದ ಚರಂಡಿನೀರು ನದಿಗೆ ಬರುವುದರಿಂದ ನದಿಯ ನೀರು ಸಂಪೂರ್ಣ ಕಲುಷಿತಗೊಂಡು ಕುಡಿಯಲು ಯೋಗ್ಯ ವಿಲ್ಲದಂತಾಗಿ ತುಂಗ ಪಾನ ಅನ್ನುವ ಪದ ಕಣ್ಣಮರೆಯಾಗಿದೆ ನದಿಯಲ್ಲಿ 35 ಟಿ.ಎಂ.ಸಿ. ಹೋಳು ತುಂಬಿ ಅನೇಕ ವರ್ಷಗಳಿಂದ ಎರಡನೆ ಬೇಳೆಗೆ ನೀರಿಲ್ಲದಂತಾಗಿದೆ. ನವಲಿ ಸಮನಾಂತರ ಜಲಾಶಯ ಕೇವಲ ಕನಸಾಗಿ ಉಳಿದಿದೆ ತುಂಗಾಭದ್ರ ಡ್ಯಾಂ ನಿರ್ಮಾಣ ಆಗಿ 69 ವರ್ಷ ಕಳೆದು ವರ್ಷ ವರ್ಷ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನದಿಂದ, ನದಿಯ ಗೇಟ್ ಕಿತ್ತು ಹೋಗಿ ಒಂದು ವರೇ ವರ್ಷ ಕಳೆದರು ಹೊಸ ಗೇಟ್ ಕಳೆದ ಬೇಸಿಗೆಯಲ್ಲಿ ಅಳವಡಿಸದೆ ಈ ವರ್ಷ ಎರಡನೇ ಬೇಳೆಗೆ ನೀರು ಕೋಡದೆ ರೈತರನ್ನು ಬೀದಿ ಪಾಲು ಮಾಡಿರುವುದು ನಮ್ಮ ಕಣ್ಣ ಮುಂದೆ ಇದೆ. ತುಂಗಾಭದ್ರ ಪ್ರತಿಯೊಬ್ಬ ನಾಗರೀಕರಿಗೆ ಅವಶ್ಯಕತೆ ಇರುವುದರಿಂದ ತುಂಗಾಭದ್ರ ರಕ್ಷಣೆ ನಮ್ಮೇಲ್ಲರ ಹೊಣೆ ಆಗಿರುತ್ತದೆ. ರಾಜಕಾರಣಗಳಿಗೆ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಎಚ್ಚರಿಸಲು ನಾವೆಲ್ಲರೂ ದೊಡ್ಡ ಶಕ್ತಿ ಆಗಬೇಕಿದೆ. ಅನೇಕ ವರ್ಷದಿಂದ ವ್ಯವಸಾಯ ಮಾಡಿ ದೇಶಕ್ಕೆ ಅನ್ನ ನೀಡುತ್ತಾ ಬಂದರು ರೈತರ ಬದುಕು ಮಾತ್ರ ಬೀದಿ ಪಾಲು ನಾವು ಬೇಳೆದ ಬೇಳೆಗೆ ವೈಜ್ಞಾನಿಕ ಬೇಲೆ ಸಿಗದೆ, ಮಾರು ಕಟ್ಟೆಯ ದರವನ್ನುನಂಬಿಕೊಂಡು ಸಾಲದ ಸುಳಿಗೆ ಸಿಲುಕಿ ಇದ್ದ ಭೂಮಿಯನ್ನು ಮಾರಿ ನಗರದಕಡೆ ಹೊಲಸೆ ಹೋಗುತ್ತಿರುವುದು ಪ್ರತಿ ವರ್ಷ ಕಾಣುತ್ತೇವೆ ಇನ್ನಾದರು ಎಚ್ಚೆತ್ತುಕೊಳ್ಳದೆ ಹೋದರೆ ಬಂಡವಾಳ ಶಾಹಿಗಳ ಕೈಗೆ ಭೂಮಿ ಹೋಗುವುದು ಖಂಡಿತ, ಈಗಲಾದರೂ ನಾವೇಲ್ಲರೂ ಒಂದಾಗಿ ರೈತರಿಗೆ ಆಗುವ ಅನ್ಯಾಯದ ವಿರುದ್ಧ ದಂಗೆ ಏಳಬೇಕಿದೆ. ಕಳಪೆ ಬೀಜ ಮಾರಾಟ ಕಳಪೆ ಗೊಬ್ಬರ ಕ್ರಿಮಿನಾಶಕ ಮಾರಾಟ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರ ತೆಗೆಯದೆ ಮೋಸ, ಎಲ್ಲ ಮೋಸಗಳನ್ನು ಎಲ್ಲಿಯವರೆಗೂ ತಡೆದುಕೊಳ್ಳುವುದು. ಈಗಲಾದರೂ ಎಚ್ಚೆತ್ತು ರೈತರು ಒಂದಾಗಿ ವಿಶ್ವರೈತ ದಿನಾಚರಣೆಯ ದಿನದಂದು ಲಕ್ಷಾಂತರ ಜನಸೇರಿ ಬೃಹತ್ ಸಮಾವೇಶದ ಮೂಲಕ ಸರ್ಕಾರಕ್ಕೆ ಎಚ್ಚರಿಸೋಣ.
ರೈತರ ಹಕ್ಕೋತ್ತಾಯಗಳು
1) ನವಲಿ ಸಮಾಂತರ ಜಲಾಶಯವನ್ನು ಶೀಘ್ರ ಜಾರಿಗೋಳಿಸಬೇಕು
2) ಜೋಳ ಖರೀದಿ ಕೇಂದ್ರ ಜನವರಿ 1 ರಿಂದ ಪ್ರಾರಂಭಿಸಬೇಕು
3) ಕಾಲುವೆಯ ಕೆಳ ಭಾಗದ ರೈತರಿಗೆ ನೀರು ಮುಟ್ಟಿಸಬೇಕು.
4) ಕಳಪೆ ಬೀಜ ಗೊಬ್ಬರ ಮಾರಾಟ ತಡೆಗಟ್ಟಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು
5) ಎರಡನೆ ಬೇಳೆಗೆ ನೀರು ಇಲ್ಲದ ಕಾರಣ
ರೈತರಿಗೆ ಪ್ರತಿ ಏಕರೆಗೆ 30,000/- ಪರಿಹಾರ ಕೊಡಬೇಕು
6) ಬತ್ತಕ್ಕೆ ಬೆಂಬಲ ಬೇಲೆ ಕನಿಷ್ಟ 4000/- ನಿಗಧಿ ಪಡಿಸಬೇಕು
7) ಬೆಲೆ ಖಾತ್ರಿ ಕಾಯ್ದೆ (ಎಂ.ಎಸ್.ಪಿ.) ಜಾರಿಮಾಡಬೇಕು
8) ಸಿಎಸ್ಎಫ್ ಫಾರಂನಲ್ಲಿ 500/- ಏಕರೆ ಕುರಿಗಾಯಿಗಳಿಗೆ ಮೀಸಲಿಡಬೇಕು
9) ತುಂಗಾಭದ್ರದ ಜಲಾಶಯದ ಗೇಟ್‌ಗಳ ಕೆಲಸ ಬೇಗ ಮುಗಿಸಬೇಕು…. ಎಲ್ಲಾ ರೈತರು ಹೋರಾಟಕ್ಕೆ ಕೈಜೋಡಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು…ಈ ಪತ್ರಿಕಾ ಪ್ರಕಟಣೆಯಲ್ಲಿ ವೆಂಕಯ್ಯಶೆಟ್ಟ, ಸಂಸ್ತಾಪಕ ಅಧ್ಯಕ್ಷರು (ಜೈಜವಾನ್ ಜೈಕಿಸಾನ ಸಂಘ)
ನಾಗರಾಜ ಭಂಗಿ
ಕ.ಕ.ಗೌರವ ಅಧ್ಯಕ್ಷರು
(ಜೈಜವಾನ್ ಜೈಕಿಸಾನ ಸಂಘ)
ನಿರುಪಾದಿ ಅಡ್ಡಿತಾ ಅಧ್ಯಕ್ಷರು
ಬಸವರಾಜ, ರುದ್ರೇಶ, ಮಲ್ಲಯ್ಯ ಹಿರೇಮಠ, ಮಲ್ಲು ಭರಗಿ, ಯಮನಪ್ಪ ಪಗಡದಿನ್ನಿ,
ಬಸವರಾಜ ಸುಲ್ತಾನಪುರ
ರಾ.ಕಾರ್ಯಧ್ಯಕ್ಷರು
ಜಿ ಗೌರವ ಅಧ್ಯಕ್ಷರು,ತಾ ಪ್ರ.ಕಾರ್ಯದರ್ಶಿ, ತಾ.ಉಪಾಧ್ಯಕ್ಷರು, ತಾ ಕಾರ್ಯದರ್ಶಿ, (ಜೈಜವಾನ್ ಜೈಕಿಸಾನ ಸಂಘ) ಉಪಸ್ಥಿತರಿದ್ದರು

Leave a Reply

Your email address will not be published. Required fields are marked *