ಬೆಂಗಳೂರು : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಜವಾಹರಲಾಲ್ ನೆಹರು ತಾರಾಲಯದಲ್ಲಿ ಇಂದು ಆಯೋಜಿಸಿದ್ದ ಬೆಂಗಳೂರು ವಿಭಾಗದ 5 ಜಿಲ್ಲೆಗಳ ಕ್ರೈಸ್ ಶಾಲಾ-ಕಾಲೇಜುಗಳ 90 ವಿಜ್ಞಾನ ಶಿಕ್ಷಕರಿಗೆ ಟೆಲಿಸ್ಕೋಪ್ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ, 2026ರ ಖಗೋಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಅವರು.
ಕಾರ್ಯಕ್ರಮದಲ್ಲಿ, ಕೆಸ್ಟೆಪ್ಸ್ ನಿರ್ದೇಶಕರಾದ ಶ್ರೀ ಸದಾಶಿವ ಪ್ರಭು, ಜವಾಹರ್ ಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ.ಗುರುಪ್ರಸಾದ್, ಐಟಿ ಬಿಟಿ,ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮಂತಿ ಮಂಜುಳ ಅವರು ಸೇರಿದಂತೆ ವಿವಿಧ ಕ್ರೈಸ್ ಶಾಲೆಗಳ ಶಿಕ್ಷಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

