ಸಿಂಧನೂರು : ರಾಮಕೃಷ್ಣ ವಿವೇಕಾನಂದ ಆಶ್ರಮ ಬಪ್ಪುರು ರಸ್ತೆ, ಸಿಂಧನೂರು ಆಶ್ರಮದಲ್ಲಿ ಇಂದು ಸಂಜೆ ಹುಣ್ಣಿಮೆಯ ಅಂಗವಾಗಿ “ವಿವೇಕ ಪೂರ್ಣಿಮೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..
ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀ ಆನಂದ ಮೋಹನ, ಶಿರಸ್ತೇದಾರರು ಆಹಾರ ಇಲಾಖೆ ಸಿಂಧನೂರು ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಟಿಸಿದರು….
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಮನೋಜಕುಮಾರ ಬಾಪಟ, ಸಂಸ್ಕೃತ ಪ್ರಾಧ್ಯಾಪಕರು, ಸಿಂಧನೂರು ಇವರು “ಭಗವದ್ಗೀತೆಯ ವಿಶ್ವಸಂದೇಶ” ವಿಷಯದ ಕುರಿತು ಗುರುಪರಂಪರೆ, ಆಧ್ಯಾತ್ಮಿಕ ಜೀವನ, ಉನ್ನತ ವಿಚಾರಗಳು, ಸಾತ್ವಿಕ ಬದುಕಿಗೆ ಭಗವದ್ಗೀತೆಯ ಮಾರ್ಗದರ್ಶನದ ಕುರಿತು ಉಪನ್ಯಾಸ ನೀಡಿದರು…
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ & ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್ ರವರು ಭಗವದ್ಗೀತೆಯ ಶ್ರೇಷ್ಠ ಚಿಂತನೆಗಳ ಕುರಿತು ಮಾತನಾಡಿ ಆಶೀರ್ವದಿಸಿದರು.

Leave a Reply

Your email address will not be published. Required fields are marked *